Advertisement
ಈ ಸೋಲು ಆಡಳಿತಾರೂಢ ಪಿಎನ್‌ಸಿ ಪಕ್ಷದ ಭಾರತ ವಿರೋಧಿ ನಿಲುವಿಗೆ ಮತದಾರರು ವಿಧಿಸಿದ ಶಿಕ್ಷೆ ಎಂದು ಬಿಂಬಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಷ್ಟೇ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮುಯಿಜ್ಜು; ಅಲ್ಲಿಯವರೆಗೆ ಮಾಲೆ ಪಾಲಿಕೆಯ ಮೇಯರ್ ಆಗಿದ್ದರು! ಸ್ವತಃ ಮಾಲ್ಡೀವ್ಸ್ ಅಧ್ಯಕ್ಷರ ನೆಲೆಯಲ್ಲೇ ಆಡಳಿತಾರೂಢ ಹಾಗೂ ಭಾರತ ವಿರೋಧಿ ನಿಲುವು ಹೊಂದಿರುವ ಪಿಎನ್‌ಸಿ ಪಕ್ಷಕ್ಕೆ ಸೋಲಾಗಿದೆ. ಇನ್ನೊಂದು ಕಡೆ ಭಾರತದ ಪರ ನಿಲುವು ಹೊಂದಿರುವ, ಇಬ್ರಾಹಿಂ ಸೊಲಿಹ್‌ರ ಎಂಡಿಪಿ ಪಕ್ಷ ಗೆದ್ದು ಬೀಗಿದೆ.ಪ್ರಸ್ತುತ ಚುನಾವಣೆಯಲ್ಲಿ ಎಂಡಿಪಿಯ ಆ್ಯದಮ್ ಅಜೀಮ್‌ಗೆ ಶೇ.45 ಮತ ಬಂದಿದ್ದರೆ, ಪಿಎನ್‌ಸಿ ಅಭ್ಯರ್ಥಿ ಅಜಿಮಾ ಶಕೂರ್‌ಗೆ ಶೇ.29 ಮತ ಬಂದಿದೆ.