Advertisement

ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿಷೇಧ; ತಾಲಿಬಾನ್‌ ಕ್ರಮ ಖಂಡಿಸಿ ತರಗತಿ ಬಹಿಷ್ಕಾರ ಹಾಕಿದ ಪುರುಷ ವಿದ್ಯಾರ್ಥಿಗಳು

09:36 AM Dec 26, 2022 | Team Udayavani |

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶವನ್ನು ತಾಲಿಬಾನ್‌ ನಿಷೇಧಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ತಾಲಿಬಾನ್‌ ಆಡಳಿತದ ಈ ಕ್ರಮವನ್ನು ಭಾರತ, ಜರ್ಮಿನಿ ಸೇರಿದಂತೆ ಅನೇಕ ದೇಶಗಳು ಖಂಡಿಸಿವೆ.

Advertisement

ಮಹಿಳಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಪ್ರವೇಶ ನಿರಾಕರಿಸಿದ್ದನ್ನು ಪುರುಷ ವಿದ್ಯಾರ್ಥಿಗಳು ಕಟುವಾಗಿ ಟೀಕಿಸಿ, ತಾವೂ ಕೂಡ ತರಗತಿಯೊಳಗೆ ಪ್ರವೇಶ ಮಾಡುವುದಿಲ್ಲ ಎಂದು ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ತಾಲಿಬಾನ್‌ ಆಡಳಿತ ಕ್ರಮಕ್ಕೆ ಸ್ವತಃ ಮಹಿಳಾ ವಿದ್ಯಾರ್ಥಿಗಳು ಪ್ರತಿಭಟನೆಯ ಧ್ವನಿ ಎತ್ತಿದ್ದು, ಆಕ್ರೋಶ ವ್ಯಕ್ತಪಡಿಸಿ, ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಮರಳಿದ ಯುಪಿ ಮೂಲದ ವ್ಯಕ್ತಿಗೆ ಕೋವಿಡ್ ಪಾಸಿಟಿವ್

“ನಾವು ನಮ್ಮ ಬಹಿಷ್ಕಾರವನ್ನು ಮುಂದುವರಿಸುತ್ತೇವೆ ಮತ್ತು ಮಹಿಳಾ ತರಗತಿಗಳನ್ನು ಮತ್ತೆ ತೆರೆಯದಿದ್ದರೆ, ನಾವು ನಮ್ಮ ಪಾಠಗಳನ್ನು ಸಹ ಬಹಿಷ್ಕರಿಸುತ್ತೇವೆ ಮತ್ತು ಶಿಕ್ಷಣವನ್ನು ಮುಂದುವರಿಸುವುದಿಲ್ಲ ”ಎಂದು ತಾಲಿಬಾನ್ ದೇಶದಲ್ಲಿ ಮಹಿಳಾ ಶಿಕ್ಷಣದ ಮೇಲಿನ ನಿಷೇಧದ ಬಗ್ಗೆ ವಿದ್ಯಾರ್ಥಿ ಮುಜಮೆಲ್ ಹೇಳಿದ್ದಾರೆ.

Advertisement

ನಮ್ಮ ಸಹೋದರಿಯರಿಗೆ ವಿಶ್ವವಿದ್ಯಾನಿಲಯಗಳ ಬಾಗಿಲು ಮುಚ್ಚಿವೆ. ನಮಗೂ ವಿಶ್ವವಿದ್ಯಾನಿಲಯಕ್ಕೆ ಹೋಗಲು ಇಷ್ಟವಿಲ್ಲ,’’ ಎಂದು ಮತ್ತೊಬ್ಬ ವಿದ್ಯಾರ್ಥಿ ಸೈತ್ ನವಿದುಲ್ಲಾ ಹೇಳಿದ್ದಾರೆ.

ನಮ್ಮ ಸಹೋದರಿಯರಿಗಾಗಿ ವಿಶ್ವವಿದ್ಯಾನಿಲಯಗಳನ್ನು ಪುನಃ ತೆರೆಯುವಂತೆ ನಾವು ಇಸ್ಲಾಮಿಕ್ ಎಮಿರೇಟ್‌ಗೆ ಕೇಳುತ್ತೇವೆ, ”ಎಂದು ಉಪನ್ಯಾಸಕ ತೌಫಿಕುಲ್ಲಾ ಹೇಳುತ್ತಾರೆ.

ಅಫ್ಘಾನಿಸ್ತಾನದ ಉನ್ನತ ಶಿಕ್ಷಣ ಸಚಿವಾಲಯವು ಡಿಸೆಂಬರ್‌ನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರವು ವ್ಯಾಪಕ ಪ್ರತಿಭಟನೆ ಮತ್ತು ಜಾಗತಿಕ ಖಂಡನೆಗೆ ಕಾರಣವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next