ಮಾಲೆ: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಜಗಳದ ನಡುವೆ, ಮಾಲ್ಡೀವ್ಸ್‌ನ ಎರಡು ಪ್ರಮುಖ ವಿರೋಧ ಪಕ್ಷಗಳು ಬುಧವಾರ ತಮ್ಮ ಸರ್ಕಾರದ ‘ಭಾರತ ವಿರೋಧಿ ನಿಲುವು’ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ಬಳಿಕ ಮಾಲ್ಡೀವ್ಸ್ ಸಚಿವರು ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಉಂಟಾದ ವೈಮನಸ್ಸು ಇದೀಗ ದೊಡ್ಡ ಮಟ್ಟದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ.
ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷಗಳಾದ ಎಂಡಿಪಿ ಮತ್ತು ಡೆಮೋಕ್ರಾಟ್‌ಗಳು ಮೊಹಮ್ಮದ್ ಮುಯಿಝು ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿವೆ. 87 ಸದಸ್ಯರ ಸದನದಲ್ಲಿ ಒಟ್ಟು 55 ಸ್ಥಾನಗಳನ್ನು ಹೊಂದಿರುವ ಈ ಎರಡು ಪ್ರಮುಖ ವಿರೋಧ ಪಕ್ಷಗಳು ವಿಶೇಷವಾಗಿ ನೆರೆಯ ಮತ್ತು ಪ್ರಮುಖ ಪಾಲುದಾರ ಭಾರತದೊಂದಿಗೆ ಹದಗೆಡುತ್ತಿರುವ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಭಾರತವನ್ನು ಮಾಲ್ಡೀವ್ಸ್‌ನ ಅತ್ಯಂತ ಹಳೆಯ ಮಿತ್ರರಾಷ್ಟ್ರಗಳೆಂದು ಕರೆದಿರುವ ಎರಡೂ ಪಕ್ಷಗಳು ಜಂಟಿ ಹೇಳಿಕೆಯಲ್ಲಿ ಮುಯಿಝೋ ಸರ್ಕಾರದ ‘ಭಾರತ ವಿರೋಧಿ ನಿಲುವು’ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಮತ್ತು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಚೀನಾದ ಹಡಗು ಸಂಶೋಧನೆ ಮತ್ತು ಸಮೀಕ್ಷೆಗಾಗಿ ಮಾಲ್ಡೀವ್ಸ್ ಬಂದರಿಗೆ ಭೇಟಿ ನೀಡಲು ಮೊಹಮ್ಮದ್ ಮುಯಿಝು ಸರ್ಕಾರದ ನಿರ್ಧಾರವನ್ನು ಎರಡೂ ಪಕ್ಷಗಳು ದೇಶದ ವಿದೇಶಾಂಗ ನೀತಿಯ ದೀರ್ಘಾವಧಿಯ ಅಭಿವೃದ್ಧಿಗೆ ಅತ್ಯಂತ ಹಾನಿಕಾರಕವೆಂದು ಬಣ್ಣಿಸಿವೆ. ಮಾಲ್ಡೀವ್ಸ್‌ನ ವಿದೇಶಾಂಗ ನೀತಿಯ ನಿರ್ದೇಶನಕ್ಕೆ ಸಂಬಂಧಿಸಿದಂತೆ, ಪ್ರಸ್ತುತ ಆಡಳಿತವು ಭಾರತ ವಿರೋಧಿ ನಿಲುವನ್ನು ತೋರುತ್ತಿದೆ ಎಂದು ಹೇಳಿವೆ. MDP ಮತ್ತು ಡೆಮೋಕ್ರಾಟ್‌ಗಳೆರಡೂ ಯಾವುದೇ ಅಭಿವೃದ್ಧಿ ಪಾಲುದಾರರನ್ನು ಮತ್ತು ವಿಶೇಷವಾಗಿ ದೇಶದ ಹಳೆಯ ಮಿತ್ರರನ್ನು ದೂರವಿಡುವುದು ದೇಶದ ದೀರ್ಘಾವಧಿಯ ಅಭಿವೃದ್ಧಿಗೆ ಅತ್ಯಂತ ಹಾನಿಕಾರಕವಾಗಿದೆ ಎಂದು ಹೇಳಿದೆ.
ಎಲ್ಲರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು:
ಎಂಡಿಪಿ ಅಧ್ಯಕ್ಷ ಫೈಯಾಜ್ ಇಸ್ಮಾಯಿಲ್ ಮತ್ತು ಡೆಮಾಕ್ರಟ್ ಪಕ್ಷದ ಅಧ್ಯಕ್ಷ ಹಸನ್ ಲತೀಫ್ ಮಾತನಾಡಿ, ಮಾಲ್ಡೀವ್ಸ್ ಜನರ ಅಭ್ಯುದಯಕ್ಕಾಗಿ ಸರ್ಕಾರ ಎಲ್ಲಾ ಅಭಿವೃದ್ಧಿ ಪಾಲುದಾರರೊಂದಿಗೆ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಬೇಕು. ಮಾಲ್ಡೀವ್ಸ್‌ನ ಸ್ಥಿರತೆ ಮತ್ತು ಭದ್ರತೆಗೆ ಹಿಂದೂ ಮಹಾಸಾಗರದಲ್ಲಿ ಸ್ಥಿರತೆ ಮತ್ತು ಭದ್ರತೆ ಅತ್ಯಗತ್ಯ. ಇಂತಹ ಪರಿಸ್ಥಿತಿಯಲ್ಲಿ ಮುಯಿಜ್ಜು ಎಲ್ಲರೊಂದಿಗೆ ಸೇರಿ ಕೆಲಸ ಮಾಡಬೇಕು. ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಯೋಚಿಸುವಂತೆ ಎರಡೂ ಪಕ್ಷಗಳ ನಾಯಕರು ಮುಯಿಜ್ಜುಗೆ ತಿಳಿಸಿದ್ದಾರೆ.
ಇದನ್ನೂ ಓದಿ: Road Mishap: ತಮಿಳುನಾಡಿನಲ್ಲಿ ಭೀಕರ ಸರಣಿ ಅಪಘಾತ… ನಾಲ್ವರು ಮೃತ್ಯು, 8 ಮಂದಿಗೆ ಗಾಯ