Advertisement

T20 ವಿಶ್ವಕಪ್‌ ವಿಜೇತರಿಗೆ ಮಾಲ್ಡೀವ್ಸ್‌ ಆಹ್ವಾನ

10:53 PM Jul 08, 2024 | Team Udayavani |

ಮಾಲೆ (ಮಾಲ್ಡೀವ್ಸ್‌): ಮಾಲ್ಡೀವ್ಸ್‌ಗೆ ಬಂದು ಟಿ20 ವಿಶ್ವಕಪ್‌ ಗೆಲುವಿನ ಸಂಭ್ರಮಾಚರಣೆ ನಡೆಸುವಂತೆ ಅಲ್ಲಿನ ಪ್ರವಾಸೋದ್ಯಮ ಸಂಸ್ಥೆ ರೋಹಿತ್‌ ಶರ್ಮ ಪಡೆಗೆ ಆಹ್ವಾನ ನೀಡಿದೆ.

Advertisement

ಮಾಲ್ಡೀವ್ಸ್‌ ಟೂರಿಸಂ ಅಸೋಸಿಯೇಶನ್‌ನ ಸಹಭಾಗಿತ್ವದಲ್ಲಿರುವ ಮಾಲ್ಡೀವ್ಸ್‌ ಮಾರ್ಕೆಟಿಂಗ್‌ ಮತ್ತು ಸಾರ್ವಜನಿಕ ಸಂಪರ್ಕ ನಿಗಮವು ಭಾರತ ಕ್ರಿಕೆಟ್‌ ತಂಡಕ್ಕೆ ವಿಶೇಷ ಆಹ್ವಾನ ನೀಡಿರುವುದಾಗಿ ಹೇಳಿಕೊಂಡಿದೆ.

ಎಂಎಂಪಿಆರ್‌ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಶಿಯುರಿ ಮತ್ತು MATI ಪ್ರಧಾನ ಕಾರ್ಯದರ್ಶಿ ಅಹ್ಮದ್ ನಜೀರ್ ಅವರು ಕಳೆದ ವಾರ ಗುರುವಾರ ಭಾರತಕ್ಕೆ ಮರಳಿದ ತಂಡವನ್ನು ಆತಿಥ್ಯ ವಹಿಸಲು ಎದುರು ನೋಡುತ್ತಿದ್ದೇವೆ. ನಿಮಗೆ ಆತಿಥ್ಯ ನೀಡುವುದು, ನಮ್ಮಲ್ಲಿ ನಿಮ್ಮ ನಿಮ್ಮ ವಾಸ್ತವ್ಯವು ಸ್ಮರಣೀಯ ಕ್ಷಣಗಳಾಗಲಿದೆ ಎಂದು ಹೇಳಿದರು.

ಭಾರತ ತಂಡವನ್ನು ದೆಹಲಿ ಮತ್ತು ಮುಂಬೈ ಎರಡರಲ್ಲೂ ಲಕ್ಷಾಂತರ ಅಭಿಮಾನಿಗಳು ವಿಜಯೋತ್ಸವದ ಮೆರವಣಿಗೆಗೆ ಮೂಲಕ ಸ್ವಾಗತಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next