Advertisement
ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಪ್ರಿಯಾಂಶು ರಾಜಾವತ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಆದರೆ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ ಪಿ.ವಿ. ಸಿಂಧು ಈ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್, ಅನುಪಮಾ ಉಪಾಧ್ಯಾಯ ಅವರೇ ಭಾರತದ ಭರವಸೆ ಆಗಿದ್ದಾರೆ.
ಚಿರಾಗ್-ಸಾತ್ವಿಕ್ ಕಳೆದ ವರ್ಷ ಇಲ್ಲಿ ಉತ್ತಮ ಪ್ರದರ್ಶನ ನೀಡಿಯೂ ಪ್ರಶಸ್ತಿ ಜಯಿಸುವಲ್ಲಿ ವಿಫಲರಾಗಿದ್ದರು. 2024ರಲ್ಲಿ ಒಟ್ಟು 4 ಫೈನಲ್ಸ್ ಆಡಿದ್ದ ಈ ಜೋಡಿ ಎರಡರಲ್ಲಿ ಚಾಂಪಿಯನ್ ಆಗಿತ್ತು. ಕೊನೆಯಲ್ಲಿ ನಡೆದ ಚೀನ ಮಾಸ್ಟರ್ನಲ್ಲಿ ಸೆಮಿಫೈನಲ್ ತನಕ ಸಾಗಿದ್ದರು. ಆರಂಭಿಕ ಸುತ್ತಿನಲ್ಲಿ ಚೈನೀಸ್ ತೈಪೆಯ ಮಿಂಗ್ ಚೆ ಲು-ಟಾಂಗ್ ಕೈ ವೀ ವಿರುದ್ಧ ಸೆಣಸಲಿದ್ದಾರೆ. “ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್ 300′ ಪ್ರಶಸ್ತಿಯನ್ನೆತ್ತಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಲಕ್ಷ್ಯ ಸೇನ್ ಭಾರತದ ನೆಚ್ಚಿನ ಆಟಗಾರನಾಗಿದ್ದಾರೆ. ಎಚ್.ಎಸ್. ಪ್ರಣಯ್ ಕೂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಇವರ ಮೊದಲ ಎದುರಾಳಿ ಕೆನಡಾದ ಬ್ರಿಯಾನ್ ಯಾಂಗ್. ಪ್ರಿಯಾಂಶು ರಾಜಾವತ್ ಚೈನೀಸ್ ತೈಪೆಯ ಲೀ ಶಿ ಫೆಂಗ್ ವಿರುದ್ಧ ಆಡಲಿದ್ದಾರೆ.
Related Articles
Advertisement
ವನಿತಾ ಡಬಲ್ಸ್ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಥಾಯ್ಲೆಂಡ್ನ ಓರ್ನಿಚಾ ಜೊಂಗÕಥಪೋರ್ನ್ಪಾರ್ನ್-ಸುಕಿಟಾ ಸುವಾಚೈ ವಿರುದ್ಧ ಆಡಲಿಳಿಯಲಿದ್ದಾರೆ.