Advertisement

2021ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ಸಿನೆಮಾ ಅಧಿಕೃತ ಪ್ರವೇಶ

07:12 PM Nov 25, 2020 | sudhir |

ನವದೆಹಲಿ: ಲಿಜೋ ಜೋಶ್ ಪೆಲ್ಲಿಶ್ಯೇರಿ ನಿರ್ದೇಶನದ ಮಲಯಾಳಂ  ಸಿನಿಮಾ ‘ಜಲ್ಲಿಕಟ್ಟು’ ಭಾರತದಿಂದ ಆಧಿಕೃತವಾಗಿ ಪ್ರತಿಷ್ಠಿತ ಆಸ್ಕರ್ 2021 ಪ್ರಶಸ್ತಿಗೆ ಪ್ರವೇಶ ಗಿಟ್ಟಿಸಿದೆ.

Advertisement

ಲಿಜೋ ನಿರ್ದೇಶನದ ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಶ್, ಸಬಮೊನ್ ಅಬ್ದುಸಮದ್ ಮುಂತಾದವರು ನಟಿಸಿದ್ದಾರೆ. ಹರೀಶ್ ಎಸ್ ಬರೆದ ಸಣ್ಣ ಕಥೆ ‘ಮಾವೋಯಿಸ್ಟ್’ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ.

ಇದೊಂದು ಆ್ಯಕ್ಷನ್‌ ಡ್ರಾಮಾ ಸಿನಿಮಾವಾಗಿದ್ದು, ಕಸಾಯಿಖಾನೆಯಿಂದ ತಪ್ಪಿಸಿಕೊಂಡು ಓಡುವ ಗೂಳಿಯೊಂದನ್ನು ಊರಿನ ಜನರು ಬೇಟೆಯಾಡುವ ಕುರಿತು  ಕಥೆಯನ್ನು ಹೆಣೆಯಲಾಗಿದೆ. ಅಂಗಮಾಲಿ ಡೈರೀಸ್‌ ಮತ್ತು ಇ ಮಾ ಯು ಲಿಜೋ ಜೋಶ್ ಈ ಹಿಂದೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು.

ಸ್ಪರ್ಧೆಯಲ್ಲಿ ದಿ ಡಿಸೈಪಲ್, ಈಸ್‌ ಲವ್‌ ಇನಫ್, ಶಿಕಾರಾ, ಚಪ್ಪಕ್‌, ಗುಂಜನ್‌ ಸಕ್ಸೆನಾ, ದಿ ಕಾರ್ಗಿಲ್‌ ಗರ್ಲ್, ಬುಲ್‌ ಬುಲ್‌ ಆ್ಯಂಡ್‌ ಸೀರಿಯಸ್‌ ಮ್ಯಾನ್‌, ಶಕುಂತಲಾ ದೇವಿ, ಗುಲಾಬೋ ಸಿತಾಬೋ ಮತ್ತಿತರ 26 ಸಿನೆಮಾಗಳನ್ನು ಹಿಂದಿಕ್ಕಿಜಲ್ಲಿಕಟ್ಟು’ ಆಸ್ಕರ್ ಗೆ ಆಯ್ಕೆಯಾಗಿದೆ.

ಇದನ್ನೂ ಓದಿ:ಅವಕಾಶ ಸಿಕ್ಕರಷ್ಟೇ ಅಭಿನಯಿಸುತ್ತೇನೆ, ಆದ್ರೆಯಾರ ಬಳಿಯೂ ಅಂಗಲಾಚಲಾರೆ…

Advertisement

ಜಲ್ಲಿಕಟ್ಟು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ರಾಹುಲ್‌ ರಾವೇಲ್‌, 14 ಜನತೀರ್ಪುಗಾರರ ತಂಡದಲ್ಲಿ ಹೆಚ್ಚಿನವರು ಆರಿಸಿದ ಸಿನೆಮಾ ಇದೇ ಆಗಿದೆ. ಮಾನವರ ಪ್ರವೃತ್ತಿ ಪ್ರಾಣಿಗಳಿಗಿಂತಲೂ ಕೆಟ್ಟದಾಗಿದೆ ಎಂಬುದನ್ನು ಬಿಂಬಿಸುವ ಸಿನೆಮಾ ಇದಾಗಿದೆ ಎಂದು ತಿಳಿಸಿದ್ದಾರೆ

ಕೋವಿಡ್‌-19 ಕಾರಣದಿಂದಾಗಿ ಇದೇ ಮೊದಲ ಬಾರಿಗೆ ವರ್ಚುವಲ್‌ ಸಭೆಯ ಮೂಲಕ ಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಕಳೆದ ಏಳು ತಿಂಗಳುಗಳಿಂದ ಚಿತ್ರಮಂದಿರಗಳು ತೆರಯದೇ ಇರುವುದರಿಂದ ಒಟಿಟಿಯಲ್ಲಿ ಬಿಡುಗಡೆ ಕಂಡ ಸಿನೆಮಾಗಳನ್ನು ಕೂಡ ಈ ಬಾರಿ ಗಣನೆಗೆ ತೆಗೆದುಕೊಳ್ಳಲಾಗಿದೆ.  ಆಸ್ಕರ್‌ ನೀಡುತ್ತಿರುವ 93ನೇ ಅಕಾಡೆಮಿ ಪ್ರಶಸ್ತಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next