Advertisement

ನಟಿ ಮೈಥಿಲಿ “ಖಾಸಗಿ ಫೋಟೊ”ಲೀಕ್ ಮಾಡಿ ಜೈಲು ಸೇರಿದ ಭೂಪ!

04:31 PM Jul 26, 2017 | Sharanya Alva |

ಕೇರಳ: ಹಿಂದೆ ಆತ್ಮೀಯರು,  ಇದೀಗ ವೈರಿಗಳು. ಈ ವೈರತ್ವವೇ ನಟಿ ಮೈಥಿಲಿಯ ಅರೆ ನಗ್ನ ಫೋಟೋಗಳನ್ನು ಹರಿಯಬಿಟ್ಟ ಭೂಪ ಈಗ ಜೈಲು ಸೇರಿದ್ದಾನೆ. 

Advertisement

ಮಲೆಯಾಳಂ ಚಿತ್ರ ನಟಿ ಮೈಥಿಲಿಯ ಅರೆನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ಬೆಚ್ಚಿಬಿದ್ದ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿ  ಪ್ರೊಡಕ್ಷನ್  ಎಕ್ಸಿಕ್ಯೂಟಿವ್ ಕಿರಣ್ ಕುಮಾರ್ ಎನ್ನಲಾಗಿದ್ದು, ಈತನ ಜೊತೆ ಒಂದೊಮ್ಮೆ ಮೈಥಿಲಿಯ ನಡುವೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದರು. ನಂತರ ಯಾವುದೋ ಕಾರಣಕ್ಕೆ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಆದರೆ ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡ ಕಿರಣ್ ಕುಮಾರ್ ಮೈಥಿಲಿಯನ್ನು ಬ್ಲಾಕ್ ಮೇಲ್ ಮಾಡಿ 75 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ. ಹಣಕೊಡಲು ಆಕೆ ನಿರಾಕರಿಸಿದ್ದರಿಂದ ಕುಪಿತಗೊಂಡ ಕಿರಣ್ ಕುಮಾರ್ ನಟಿಯ ಖಾಸಗಿ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಆತನ ಕೃತ್ಯ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next