Advertisement

Actress: ವಿಮಾನದಲ್ಲಿ ಖ್ಯಾತ ನಟಿಯ ಮೈ ಮುಟ್ಟಲು ಬಂದ ವ್ಯಕ್ತಿ; ಕುಡಿತದ ನಶೆಯಲ್ಲಿ ಕಿರುಕುಳ

12:04 PM Oct 11, 2023 | Team Udayavani |

ಕೊಚ್ಚಿ: ವಿಮಾನದಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಮಲಯಾಳಂ ನಟಿ ದಿವ್ಯ ಪ್ರಭಾ ಅವರು ಸೋಮವಾರ(ಅ.9 ರಂದು) ಮುಂಬೈಯಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ AI 681 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕ ಕುಡಿದ ಮತ್ತಿನಲ್ಲಿ ಕಿರುಕುಳ ನೀಡಿರುವುದಾಗಿ ನಟಿ ಹೇಳಿದ್ದಾರೆ.

“ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಬಗ್ಗೆ ಗಗನಸಖಿಗೆ ಮಾಹಿತಿ ನೀಡಿದಾಗ, ಅವರು ಟೇಕಾಫ್‌ ಗೆ ಸ್ವಲ್ಪ ಸಮಯ ಇರುವ ವೇಳೆ ನನ್ನ ಸೀಟ್‌ ನ್ನು ಬದಲಾಯಿಸುವ ಕ್ರಮವನ್ನು ಮಾತ್ರ ಕೈಗೊಂಡಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಸಮಸ್ಯೆಯನ್ನು ವಿಮಾನ ನಿಲ್ದಾಣ ಮತ್ತು ವಿಮಾನಯಾನ ಅಧಿಕಾರಿಗಳಿಗೆ ತಿಳಿಸಲಾಯಿತು, ಅವರು ನನ್ನನ್ನು ವಿಮಾನ ನಿಲ್ದಾಣದ ಪೊಲೀಸ್ ಸಹಾಯ ಪೋಸ್ಟ್‌ಗೆ ಹೋಗುವಂತೆ ಸೂಚನೆ ನೀಡಿದರು ಎಂದು ನಟಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hamas War: ವ್ಹೀಲ್ ಚೇರ್ ನಲ್ಲಿ ಕುಳಿತು ಇಸ್ರೇಲ್ ಮೇಲೆ ಪ್ರತೀಕಾರ; ಈತನೇ ಹೊಸ ಬಿನ್ ಲಾಡೆನ್

“ಏರ್ ಇಂಡಿಯಾ ಗ್ರೌಂಡ್ ಆಫೀಸ್ ಮತ್ತು ವಿಮಾನ ಸಿಬ್ಬಂದಿಯ ಪ್ರತಿಕ್ರಿಯೆ ಸೂಕ್ತವಾಗಿರಲಿಲ್ಲ” ಎಂದು ನಟಿ ಬರೆದಿದ್ದಾರೆ.

Advertisement

“ಮದ್ಯದ ನಶೆಯಲ್ಲಿದ್ದ ವ್ಯಕ್ತಿ ತನ್ನ ಸೀಟು ಬಿಟ್ಟು, ನನ್ನ ಸೀಟಿನಲ್ಲಿ ಕೂತಿದ್ದ. ಇದಲ್ಲದೆ ಆತ ಯಾವ ಅರ್ಥವೇ ಇಲ್ಲದೆ, ಸೀಟಿನ ವಿಚಾರವಾಗಿ ನನ್ನೊಂದಿಗೆ ವಾಗ್ವಾದ ನಡೆಸಿದ್ದಾನೆ. ಇದಾದ ಬಳಿಕ ಅನುಚಿತವಾಗಿ ವರ್ತಿಸಿ, ಮೈ ಮುಟ್ಟಲು ಮುಂದಾಗಿದ್ದಾನೆ” ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೇರಳ ಪೊಲೀಸರಿಗೆ ಇಮೇಲ್‌ ಮೂಲಕ ದೂರು ನೀಡಿದ ಪ್ರತಿಯನ್ನು ಸ್ಕ್ರೀನ್‌ ಶಾಟ್‌ ಮೂಲಕ ನಟಿ ಹಂಚಿಕೊಂಡಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ಮತ್ತು ವಿಮಾನಯಾನ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಾಗಿದೆ. ಸದ್ಯ ಈ ಬಗ್ಗೆ ನಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next