Advertisement

ಮಳವೂರು ಗ್ರಾ. ಪಂಚಾಯತ್‌

12:06 PM Feb 04, 2018 | Team Udayavani |

ಕೆಂಜಾರು: ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಂಜಾರು ಗ್ರಾಮದ 89, ಮಳವೂರು ಗ್ರಾಮದ 2 ಮಂದಿಗೆ 94 ಸಿಸಿಯಡಿಯಲ್ಲಿ ಹಕ್ಕುಪತ್ರವನ್ನು ಶಾಸಕ ಕೆ. ಅಭಯಚಂದ್ರ ಅವರು ವಿತರಿಸಿದರು.

Advertisement

ಪೊರ್ಕೋಡಿ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರು ಹಕ್ಕು ಪತ್ರವನ್ನು ವಿತರಿಸಿ ಮಾತನಾಡಿ, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಸರಕಾರಿ ಜಾಗದಲ್ಲಿ ಮನೆ ಮಾಡಿಕುಳಿತ ಆರ್ಥಿಕವಾಗಿ ದುರ್ಬಲ ಜನರಿಗೆ ಹಕ್ಕು ಪತ್ರ ನೀಡಬೇಕೆಂಬುದು ಆಶಯವಾಗಿದ್ದು, ಇದು 3 ವರ್ಷಗಳಿಂದ ನನೆಗುದಿಗೆಗೆ ಬಿದ್ದಿದ್ದು, ಹೋರಾಟ ನಡೆಸಿ, ಕಾನೂನು ಬದಲಾವಣೆ ಮೂಲಕ ಇದನ್ನು ಬಡವರಿಗೆ ಸಿಗುವಂತೆ ಮಾಡಿದ್ದಾರೆ. ಈ ಮೂಲಕ ಅವರಿಗೆ ಕಾನೂನು ಮೂಲಕ ಮನೆನಂಬ್ರ, ನಳ್ಳಿನೀರು, ವಿದ್ಯುತ್‌, ರೇಶನ್‌ ಕಾರ್ಡ್‌, ಆಧಾರ ಕಾರ್ಡ್‌ ಸಿಗವಂತಾಗುತ್ತದೆ ಎಂದರು.

ಜಿ.ಪಂ.ಸದಸ್ಯೆ ವಸಂತಿ ಕಿಶೋರ್‌, ತಾ.ಪಂ. ಸದಸ್ಯರಾದ ಸುಪ್ರೀತಾ ಶೆಟ್ಟಿ , ಬಶೀರ್‌, ಮಳವೂರು ಗ್ರಾ.ಪಂ.ಅಧ್ಯಕ್ಷ ಗಣೇಶ್‌ ಅರ್ಬಿ, ಉಪಾಧ್ಯಕ್ಷೆ ವನಜಾ ಬಿ. ಶೆಟ್ಟಿ, ಕೆಡಿಪಿ ಸದಸ್ಯ ಜೆ.ಎಂ. ಹಾಜಿ, ಬಾಳ ಗ್ರಾ.ಪಂ. ಅಧ್ಯಕ್ಷ ಆದಂ, ಗ್ರಾಮ ಲೆಕ್ಕಾಧಿಕಾರಿ ಸುರಕ್ಷಾ ಹಾಗೂ ಗ್ರಾಮ ಸದಸ್ಯರು ಉಪಸ್ಥಿತರಿದ್ದರು. ಮಳವೂರು ಗ್ರಾಮ ಪಂಚಾಯತ್‌ ಪಿಡಿಒ ವಿಶ್ವನಾಥ ಬಿ. ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುರತ್ಕಲ್‌ ಹೋಬಳಿಯ ಕಂದಾಯ ನಿರೀಕ್ಷಕ ನವೀನ್‌ ಕುಮಾರ್‌ ನಿರೂಪಿಸಿದರು.

ಜನರ ಪರದಾಟ
ಜೋಕಟ್ಟೆ ಆಮಂತ್ರಣ ಹಾಲ್‌ನಲ್ಲಿ ಎಂದು ನಿಗದಿಯಾಗಿದ್ದ ಈ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ ಕಾರಣ ಜನರಿಗೆ ಗೊಂದಲ ಹಾಗೂ ಪರದಾಟಕ್ಕೆ ಕಾರಣವಾಯಿತು. ಕೆಲವರಿಗೆ ಮಾತ್ರ ಈ ಬದಲಾವಣೆಯ ಬಗ್ಗೆ ತಿಳಿಸಲಾಗಿತ್ತು.

ಓವರ್‌ ಹೆಡ್‌ ಟ್ಯಾಂಕ್‌ 
ಮನೆ ಕಟ್ಟಲು ಅಶ್ರಯ ಯೋಜನೆಯಡಿಯಲ್ಲಿ 1.40 ಲಕ್ಷ ರೂಪಾಯಿ ಸಿಗುತ್ತದೆ. ಉಳಿದ ಜನರಿಗೂ 10 ದಿನಗಳಲ್ಲಿ
ಹಕ್ಕು ಪತ್ರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪಂಚಾಯತ್‌ ಕಾರ್ಯನಿರ್ವಹಿಸಬೇಕು. 45 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಎಲ್ಲ ಮನೆಮನೆಗೆ ನೀರು ಸಿಗಬೇಕಾಗಿದೆ. ಜಿಲ್ಲಾ ಪಂಚಾಯತ್‌ ವತಿಯಿಂದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಆಗಬೇಕು ಎಂದು ಶಾಸಕ ಕೆ. ಅಭಯಚಂದ್ರ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next