Advertisement

ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್‌

10:03 AM Jun 18, 2021 | Team Udayavani |

ಪ್ಲಾನ್‌ ಪ್ರಕಾರ ಎಲ್ಲವೂ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಬಹುನಿರೀಕ್ಷಿತ “ಕೆಜಿಎಫ್-2′ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಕೋವಿಡ್‌ ಭಯ, ಅನಿರೀಕ್ಷಿತ ಲಾಕ್‌ಡೌನ್‌, ಅನಿರ್ಧಿಷ್ಟವಧಿ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ ಬಂದ್‌ ಆಗಿದ್ದರಿಂದ, “ಕೆಜಿಎಫ್-2′ ಅಂದುಕೊಂಡ ಸಮಯಕ್ಕೆ ಅಭಿಮಾನಿಗಳ ಮುಂದೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಸಿನಿಪ್ರಿಯರಿಗೆ “ಕೆಜಿಎಫ್-2′ ಬಗ್ಗೆ ಇರುವ ಕ್ರೇಜ್‌ ಅಂತೂ ಕಿಂಚಿಂತೂ ಕಡಿಮೆಯಾಗಿಲ್ಲ.

Advertisement

ಅದಕ್ಕೆ ಈಗ ಮತ್ತೂಂದು ಉದಾಹರಣೆ ಅಂದ್ರೆ ನಟಿ ಮಾಳವಿಕಾ ಅವಿನಾಶ್‌ ಅವರ ಪೋಸ್ಟ್‌. ಹೌದು, ಬಹುತೇಕರಿಗೆ ಗೊತ್ತಿರುವಂತೆ, ಮಾಳವಿಕಾ ಅವಿನಾಶ್‌ “ಕೆಜಿಎಫ್-2′ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಮಾಳವಿಕಾ ಸದ್ಯ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕಲಾ ಸಂಚಾರಿ ಕಣ್ತುಂಬ ಕನಸು: ಉದಯವಾಣಿ ಜೊತೆಗೆ ಸಂಚಾರಿ ವಿಜಯ್ ಕೊನೆಯ ಮಾತುಕತೆ

ಇದೀಗ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್‌ ನೀಡುತ್ತಿರುವ ಕೆಲವು ಫೋಟೋಗಳನ್ನು ಮಾಳವಿಕಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ಜೀವನವು ಸಾಮಾನ್ಯ ಸ್ಥಿತಿಗೆ ಬರದೇ ಇರಬಹುದು. ಆದರೆ ಅದರ ಕೆಲವು ಹೋಲಿಕೆ, 50 ದಿನಗಳ ನಂತರ ಕೆಲಸ…’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಫೋಟೊಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದು, ಸಿನಿಪ್ರಿಯರು,ಅಭಿಮಾನಿಗಳು “ಕೆಜಿಎಫ್-2′ ಸಿನಿಮಾದ ಬಗ್ಗೆ, ಬಿಡುಗಡೆಯ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next