Advertisement

ಎರಡನೇ ಹಾಡು ರಿಲೀಸ್‌ ಗೆ ʼಪಠಾಣ್‌ʼ ರೆಡಿ: ಮತ್ತೆ ಬೋಲ್ಡ್‌ ಲುಕ್‌ ನಲ್ಲಿ ಕಾಣಿಸಿಕೊಂಡ ದೀಪಿಕಾ

03:33 PM Dec 20, 2022 | Team Udayavani |

ಮುಂಬಯಿ: ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಚಿತ್ರದ ʼಬೇಷರಂ ರಂಗ್‌ʼ ಹಾಡಿನ ಬಳಿಕ ಮತ್ತೊಂದು ಹಾಡು ರಿಲೀಸ್‌ ಮಾಡಲು ಚಿತ್ರ ತಂಡ ರೆಡಿಯಾಗಿದೆ.

Advertisement

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಫಸ್ಟ್‌ ಲುಕ್ ರಿಲೀಸ್‌ ಮಾಡಿ, ಹಾಡಿನ ರಿಲೀಸ್‌ ಡೇಟನ್ನು ರಿವೀಲ್‌ ಮಾಡಿದೆ. ಕಿಂಗ್‌ ಖಾನ್‌ ಉದ್ದ ಕೂದಲು ಬಿಟ್ಟುಕೊಂಡು, ಸನ್‌ ಗ್ಲಾಸ್‌ ಹಾಕಿಕೊಂಡು ರಫ್‌ & ಟಫ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಟ್‌ ಲುಕ್ ನಲ್ಲಿ ಶಾರುಖ್‌ ಪಕ್ಕ ನಿಂತುಕೊಂಡಿರುವ ಪೋಸ್ಟರನ್ನು ಚಿತ್ರ ತಂಡ ರಿಲೀಸ್‌ ಮಾಡಿದೆ.

ಇದನ್ನೂ ಓದಿ: ʼಕಾಂತಾರʼಕ್ಕೆ 400 ಕೋಟಿ ಲಾಭ: ರಿಷಬ್ ಶೆಟ್ಟಿ ಸೇರಿ ನಟರು ಪಡೆದ ಸಂಭಾವನೆ ಎಷ್ಟು…?

ʼಜೂಮ್ ಜೋ ಪಠಾಣ್‌ʼ ಹಾಡಿನೊಂದಿಗೆ ಡ್ಯಾನ್ಸ್‌ ಮಾಡಲು ಸಿದ್ದರಾಗಿ. ʼಪಠಾಣ್‌ʼ ಸಿನಿಮಾದ ಎರಡನೇ ಹಾಡು ಡಿ.22 ರಂದು ರಿಲೀಸ್‌ ಆಗಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ.

ಈ ಹಾಡು ನಾಯಕನ ಸುತ್ತ ಸಾಗುತ್ತದೆ ಎಂದು ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ಹೇಳಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ 2023 ರ ಜನವರಿ 25 ರಂದು ಸಿನಿಮಾ ತೆರೆಗೆ ಬರಲಿದೆ. ಶಾರುಖ್‌ , ದೀಪಿಕಾ, ಜಾನ್‌ ಅಬ್ರಹಾಂ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಇತ್ತೀಚೆಗೆ ʼಪಠಾಣ್‌ʼ ಸಿನಿಮಾದ ʼಬೇಷರಂ ರಂಗ್‌ʼ ಹಾಡಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೇಸರಿ ಬಣ್ಣವನು ಹಾಡಿನಲ್ಲಿ ಅವಮಾನಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next