Advertisement

ಮಾಸ್ಕ್ ಬಳಸುವುದು ರೂಢಿಸಿಕೊಳ್ಳಿ

04:52 AM Jun 19, 2020 | Lakshmi GovindaRaj |

ಮೈಸೂರು: ನಗರದಲ್ಲಿ ಹಲವೆಡೆ ಗುರವಾರ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ – ಸಂಸ್ಥೆಗಳು ಮಾಸ್ಕ್ ಡೇ ಆಚರಿಸಿದವು. ಮೈಸೂರು ನಗರ ಪೊಲೀಸ ಇಲಾಖೆ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆಗೆ  ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಮಾಸ್ಕ್ ದಿನಾಚರಣೆಯ ಭಾಗವಾಗಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ಹೊರಡುತ್ತಿದೆ. ಜನರು ಮಾಸ್ಕ್ ಧರಿಸುವುದನ್ನು  ರೂಢಿ ಮಾಡಿಕೊಳ್ಳಬೇಕು ಎಂದರು. ಡಿಸಿಪಿ ಡಾ.ಎ.ಎನ್‌.ಪ್ರಕಾಶ್‌ ಗೌಡ, ಡಿಸಿಪಿ ಗೀತಾ ಇತರರಿದ್ದರು.

ನಗರಪಾಲಿಕೆ ಜಾಗೃತಿ ಜಾಥಾ: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾಸ್ಕ್ ಡೇ ಪ್ರಯುಕ್ತ ನಗರದ ಅಗ್ರಹಾರ ವೃತ್ತದಲ್ಲಿ ಸಾರ್ವಜನಕರು ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಜಾಥಾಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌  ಜಿ.ಶಂಕರ್‌, ಮೇಯರ್‌ ತಸ್ನೀಂ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಬಳಕೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ  ಉದ್ದೇಶದಿಂದ ಮಾಸ್ಕ್ ದಿನಾಚರಣೆ ಘೊಷಣೆ ಮಾಡಲಾಗಿದೆ ಎಂದರು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಪಂ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ, ಡಿಎಚ್‌ಒ ಡಾ.ವೆಂಕಟೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next