Advertisement
ವಿಶ್ವಕ್ಕೆ ನೆರಳು ಒದಗಿಸುವ ಸಶಕ್ತ ರಾಷ್ಟ್ರ ಎಂಬುದನ್ನು ನಾವು ಅರಿಯಬೇಕಿದೆ.
Related Articles
Advertisement
ಇನ್ನು ಸ್ವದೇಶ ಜಾಗೃತಿ, ಸಾಕಾರಕ್ಕಾಗಿ “ಮೇಕ್ ಇನ್ ಇಂಡಿಯಾ’ ಎಂಬ ಪರಿಕಲ್ಪನೆಯೂ ನಿರ್ಣಾಯಕ ಹೆಜ್ಜೆಯಾಗಿದೆ. ಇದರಿಂದ ಸ್ವದೇಶಿ ಉತ್ಪನ್ನಗಳ ಮೇಲಿನ ಭಾರತದ ಹಿಡಿತ ಇನ್ನೂ ಹೆಚ್ಚು ಉತ್ಸಾಹ ರೂಪ ಪಡೆಯುತ್ತಿದೆ. ಅನೇಕ ಸ್ವಯಂ ಭಾರತೀಯ ಸ್ವದೇಶಿ ಭಾರತೀಯ ಉತ್ಪನ್ನಗಳ ಮಾರುಕಟ್ಟೆ ಉದ್ಯಮಗಳು ರಾಷ್ಟ್ರಾದ್ಯಂತ ಬೇರು ಬಿಡುತ್ತಿವೆ. ಇದು ಅವಶ್ಯವಾಗಿ ಬೇಕಾಗಿರೋದು. ಈ ಆತ್ಮನಿರ್ಭರ ಇಂದು ನಿನ್ನೆಯದಲ್ಲ ನಮ್ಮ ಋಷಿಮುನಿಗಳ ಕಾಲದಿಂದಲೂ ಆತ್ಮನಿರ್ಭರರಾಗಿಯೇ ಬದುಕುತ್ತಿದ್ದೇವೆ. ಗಿಡಮೂಲಿಕೆಗಳ ಸದ್ಬಳಕೆಯಿಂದ ಆಯುರ್ವೇದ ಪದ್ಧತಿಯಿಂದ ಆರೋಗ್ಯ ಕ್ಷೇತ್ರ ಸಶಕ್ತೀಕರಣವಾಗಿತ್ತು.
ಅನೇಕ ಸ್ವದೇಶಿ ಚಳವಳಿ ಹೋರಾಟಗಳಿಂದ ಭಾರತದ ಅನೇಕ ಸ್ವಯಂ ಸೇವಕರು ಹೋರಾಟ ಮಾಡಿ¨ªಾರೆ. ಸ್ವದೇಶಿ ಚಳವಳಿಯ ನೇತಾರ ರಾಜೀವ್ ದೀಕ್ಷಿತ್ ಹೋರಾಟ ಮುಂಚೂಣಿ ಪಡೆದಿತ್ತು. ಗಾಂಧೀ ತಮ್ಮ ಜೀವನುದ್ದದುಕ್ಕೂ ಸ್ವದೇಶಿ ವಸ್ತುಗಳನ್ನು ಬೆಂಬಲಿಸಿದರು. ರಂಗಕರ್ಮಿ ಪ್ರಸನ್ನ ಅವರು ಸ್ವದೇಶಿ ವಸ್ತುಗಳನ್ನು ಬೆಂಬಲಿಸುವುಕ್ಕಾಗಿ “ಪವಿತ್ರ ಆರ್ಥಿಕತೆ’ ಎಂಬ ಯೋಜನೆಯನ್ನು ಪರಿಚಯಿಸಿದ್ದಾರೆ.ಆದರೆ ಬ್ರಿಟಿಷರು ಆಳ್ವಿಕೆಯೂ ನಮ್ಮನ್ನು ಗುಲಾಮಗಿರಿ ತಳ್ಳಿ ವಿದೇಶಿ ವ್ಯಾಮೋಹಕ್ಕೆ ಒಳಗಾಗುವಂತೆ ಮಾಡಿತ್ತು. ಅನಂತರದ ರಾಜಕೀಯದ ಮಹತ್ವಾಕಾಂಕ್ಷೆ ಅಭಿವೃದ್ಧಿ ದೃಷ್ಟಿಕೋನಗಳಿಂದ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಆಹ್ವಾನದಿಂದ ಭಾರತಕ್ಕೆ ಸ್ವಲ್ಪ ವ್ಯಾಪಾರದ ಮಹತ್ವವೂ ಸಂಕುಚಿತಗೊಳಿಸಿತ್ತು. ತದನಂತರದ ಪ್ರಚಲಿತ ಕೇಂದ್ರ ಸರಕಾರಗಳ ಕೆಲವು ರೈತಾಪಿ, ಕೃಷಿ ಪ್ರಾಧಾನ್ಯತೆ, ವ್ಯಾಪಾರದ ನೀತಿ ಯೋಜನೆಗಳಿಂದ ಬಹುತೇಕ ಭಾರತೀಯರಿಗೆ ಒಂದು ಭೂಮಿಕೆ ಒದಗಿಸಿ ರಫ್ತು-ಆಮದು ಭಾರತೀಯರಿಂದಲೇ ಆಗಬೇಕೆನ್ನುವ ನಿರ್ಧಾರಕ್ಕೆ ಬಂದಿತು. ಅಭಿವೃದ್ಧಿಗೆ ವೇಗ
ಭಾರತದಲ್ಲೇ ಉತ್ಪನ್ನಗಳ ಮಾರುಕಟ್ಟೆ ತಯಾರಾದರೆ ಭಾರತದ ಅಭಿವೃದ್ಧಿಗೆ ವೇಗ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಮಾಣ ತಡೆಯುವಲ್ಲಿ ಭಾರತ ಯಶಸ್ವಿಯಾಗಬಹುದು. ಶೈಕ್ಷಣಿಕ, ಔದ್ಯೋಗಿಕವಾಗಿ ಜಾಗತಿಕ ಮಟ್ಟದಲ್ಲಿ ಭಾರತ ಸಶಕ್ತ ರಾಷ್ಟ್ರಗಳ ಸ್ಥಾನದಲ್ಲಿ ಮೇಲೇರಬಹುದು. ಇನ್ನೂ ಮುಂದೆ ಬಹುರಾಷ್ಟ್ರೀಯ ಕಂಪೆನಿಗಳ ಹಲವು ಒಪ್ಪಂದಗಳಿಗೆ ತಿಲಾಂಜಲಿ ಹಾಡಲು ರಾಷ್ಟ್ರೀಯತೆಯ ಮೇಕ್ ಇನ್ ಇಂಡಿಯಾ ಯೋಜನೆಗಳು ಭಾರತದ ಆರ್ಥಿಕತೆಗೆ ಅಭಿವೃದ್ಧಿಗೆ ಬಲ ತುಂಬುವ ಉತ್ಸಾಹದಲ್ಲಿದೆ. ಈಗಾಗಲೇ ಇಂತಹ ಆತ್ಮನಿರ್ಭರ ಮನಸ್ಥಿತಿ ಪ್ರತಿಯೊಬ್ಬ ಭಾರತೀಯನಲ್ಲಿ ನೆಲೆಯೂರಿದೆ. ಮೊನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರು ಹೇಳಿದಂತೆ ಸೇನಾವಲಯ, ರಕ್ಷಣಾ ಕ್ಷೇತ್ರದಲ್ಲೂ ಸ್ವದೇಶಿ ಉತ್ಪನ್ನವಾಗಿ ಶಸ್ತ್ರಾಸ್ತ್ರಗಳಿಗೆ ಅನುಮೋದನೆ ಕೊಟ್ಟಿದ್ದು ಭಾರತಕ್ಕೆ ಆನೆ ಬಲ ತಂದಿದೆ. ಈ ಮೇಕ್ ಇನ್ ಇಂಡಿಯಾ ಲಾಭ ನಷ್ಟ ಹೋಲಿಕೆ ನೋಡಿದರೆ ಅಭಿವೃದ್ಧಿಪಥದಲ್ಲಿ ಭಾರತ ಯಶಸ್ವಿಯಾಗುವುದು ಶತಃ ಸಿದ್ಧ ಅಂತಹ ಭಾರತಕ್ಕೆ ನಾವು ಕೈಜೋಡಿಸಬೇಕು. ಆಗಲಾದರೂ ಸ್ವದೇಶಿ ಚಳುವಳಿಯ ಯುವ ಹೋರಾಟದ ರೂವಾರಿ ರಾಜೀವ್ ದೀಕ್ಷಿತ್‌ರಂಥ ಹೋರಾಟಗಾರರಿಗೆ ಗೌರವಾದರು ಸಿಗುತ್ತದೆ.