Advertisement

ಮಕ್ಕಳಿಗೆ ಅರಿವು ಮೂಡಿಸಿ

04:54 PM Dec 21, 2017 | Team Udayavani |

ನರಗುಂದ: ಈ ಜಗತ್ತನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಧರ್ಮಕ್ಕಿದೆ. ಅಂಥ ಧರ್ಮದ ವೈಚಾರಿಕತೆಯೊಂದಿಗೆ ಇಂದಿನ ಮಕ್ಕಳಿಗೆ ಜನನದಿಂದಲೇ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ- ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಕರೆ ನೀಡಿದರು.

Advertisement

ತಾಲೂಕಿನ ಕೊಣ್ಣೂರ ಸಮೀಪದ ಸುಕ್ಷೇತ್ರ ಗೋವನಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಜೆ ಗುರು ಬ್ರಹ್ಮಾನಂದರ 80ನೇ ಜಾತ್ರಾ
ಮಹೋತ್ಸವ ಹಾಗೂ ಬ್ರಹ್ಮಾನಂದರ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಎಷ್ಟೆಲ್ಲ ಆಸ್ತಿ, ಅಂತಸ್ತು ಗಳಿಸಿದರೂ ಮನಸ್ಸು, ಆತ್ಮ ನೆಮ್ಮದಿ ಹೊಂದುವುದಿಲ್ಲ. ಯಾರಲ್ಲಿ ನೈಜ ನೆಮ್ಮದಿ, ಶಾಂತಿ ಇರುತ್ತವೆಯೋ ಅವರೇ ನಿಜವಾದ ದೇವಮಾನವರು. ಧರ್ಮದಿಂದ ನಡೆದರೆ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆಯುವುದು ಎಂದರು.

ನರಸಾಪುರ ಹಿರೇಮಠದ ಮರುಳ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಇಂದಿನ ಯಾಂತ್ರಿಕ, ತಾಂತ್ರಿಕ ಜೀವನಶೈಲಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಸಂಸ್ಕೃತಿ ಸಂಸ್ಕಾರ ಮಾಯವಾಗಿ ಯಾರಿಗೂ ಗೌರವ ನೀಡದೆ ಕ್ಷಣಿಕ ಸುಖದ ಹವನಿಕೆಯತ್ತ ಸಾಗುತ್ತಿರುವುದು ಕಳವಳಕಾರಿ ಎಂದು ವಿಷಾದಿಸಿದರು.  ಜಗತ್ತು ಸಾಮಾನ್ಯವಲ್ಲ. ನಾಲ್ಕು ದಿನ ಬಾಳಿ ಬದುಕಿ ಎಲ್ಲವನ್ನು
ಇಲ್ಲೇ ಬಿಟ್ಟು ಮತ್ತೆ ಮರಳಿ ಮಣ್ಣು ಸೇರುವ ಈ ದೇಹಕ್ಕೆ ದುರಾಸೆ ಅಂಟಿಕೊಂಡಿದೆ. ಆ ದುರಾಸೆ ದೂರವಾಗಬೇಕಾದರೆ ಇಂಥ ಧರ್ಮ
ಕಾರ್ಯಗಳಲ್ಲಿ ಪಾಲ್ಗೊಂಡು ಜೀವನ ಸಾರ್ಥಕಗೊಳಿಸಬೇಕು ಎಂದು ಹೇಳಿದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ನೇತೃತ್ವ, ವರ್ತಕ ಕಿಷ್ಟಣ್ಣ ಬಿಜಾಪುರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಆರ್‌.ಎಚ್‌. ಯಾವಗಲ್ಲ, ಎಸ್‌. ಉಮಾಪತಿ ಶಾಸ್ತ್ರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next