ಈ ಸಂದರ್ಭದಲ್ಲಿ ನೆನಪಾಗುವುದು ಜಪಾನಿನ ಒಂದು ಪುಟ್ಟ ಹಳ್ಳಿಯ ಕಥೆ. ನಮ್ಮ ಮನೆಯಲ್ಲಿನ, ಊರಿನ ಶೂನ್ಯ ತ್ಯಾಜ್ಯ ಸಾಧನೆಗೆ ಇಲ್ಲಿಂದ ಸ್ಫೂರ್ತಿ ಸಿಕ್ಕಬಹುದು. ಕಸ ವಿಲೇವಾರಿ ಅಥವಾ ನಿರ್ವಹಣೆ ಎಂಬುದೂ ಒಂದು ಬಗೆಯಲ್ಲಿ ಡಬಲ್ ಎಂಜಿನ್ ಸರಕಾರ ನಡೆಸಿದಂತೆಯೇ. ನಾಗರಿಕರು ಮತ್ತು ಸ್ಥಳೀಯ ಸಂಸ್ಥೆ ಇಬ್ಬರೂ ಒಂದೇ ಧಾಟಿಯಲ್ಲಿ ಆಲೋಚಿಸ ಬೇಕು, ನಡೆಯಬೇಕು. ಆಗ ಕಸ ಒಂದು ಸಂಪನ್ಮೂಲ, ಇಲ್ಲವೇ ಸಮಸ್ಯೆ.
Advertisement
ಕಮಿಕತ್ಸು ಆ ಹಳ್ಳಿ ಹೆಸರು. ಹೆಚ್ಚೆಂದರೆ 1,500 ಮಂದಿ ಜನಸಂಖ್ಯೆ. ಊರೆಲ್ಲ ಮಲಗಿರುವಾಗ ಎದ್ದು ಕುಳಿತಿದ್ದ ಬುದ್ಧನಂತೆಯೇ, ದೇಶ-ಜಗತ್ತು ಕಸ ಉತ್ಪತ್ತಿಯ ಅಭ್ಯಾಸ (ಯೂಸ್ ಆ್ಯಂಡ್ ತ್ರೋ)ದಲ್ಲಿ ಮುಳುಗಿದ್ದಾಗ ಈ ಹಳ್ಳಿ ಶೂನ್ಯ ತ್ಯಾಜ್ಯದ ಸಂಕಲ್ಪ ಮಾಡಿತು. ಕಸದ ಉತ್ಪತ್ತಿಯನ್ನು ಕುಗ್ಗಿಸುವ ಹಾಗೂ ಮರು ಬಳಕೆ ಸಂಸ್ಕೃತಿಯನ್ನು ಬೆಳೆಸುವ ಹಾದಿಯನ್ನು ಆಯ್ದುಕೊಂಡಿತು.
Related Articles
Advertisement
ಇದರ ತರುವಾಯ ಒಂದು ಅತ್ಯಂತ ಸೃಜನಶೀಲ ವಾದ, ನಾವೀನ್ಯದಿಂದ ಕೂಡಿದ ಅಂಗಡಿಯನ್ನು ಸಂಪೂರ್ಣ ಮರು ಬಳಕೆಯಾದ ವಸ್ತುಗಳ ಮೂಲಕವೇ ಕಲಾತ್ಮಕವಾಗಿ ರೂಪಿಸಿತು. ಇದರ ಮುಖೇನ ಹೇಗೆ ವಸ್ತುಗಳ ಮರು ಬಳಕೆ ಸಾಧ್ಯ ಎಂಬುದನ್ನು ಉದಾಹರಣೆ ಸಮೇತ ವಿವರಿಸಿತು. ಇದು ಹಲವರಿಗೆ ಸ್ಫೂರ್ತಿಯಾಯಿತು. ಯಾವು ದನ್ನೂ ವ್ಯರ್ಥ, ತ್ಯಾಜ್ಯ ಎಂದುಕೊಂಡಿದ್ದರೂ ಅವು ಗಳನ್ನು ಆಸಕ್ತಿದಾಯಕ ರೀತಿಯಲ್ಲಿ ಬಳಸಲು ಆರಂಭಿಸಿದರು.
ಆಹಾರ ತ್ಯಾಜ್ಯ, ಕೃಷಿ ಉತ್ಪನ್ನಗಳ ಮರುಬಳಕೆಗೂ ನಾನಾ ಪರಿಹಾರಗಳನ್ನು ಹುಡುಕಿತು. ಕೆಲವು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಈ ಮರು ಬಳಕೆಯ ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಮಾರಾಟದವರೆಗೂ ಕಾರ್ಯ ನಿರತವಾಯಿತು. ಸ್ಥಳೀಯ ಉದ್ಯಮ ಗಳೂ ದನಿಗೂಡಿಸಿದವು.ಇಲ್ಲಿ ತೆರೆದ ಒಂದು ಹೊಟೇಲ್‌ನ ಕತೆಯೂ ಆಸಕ್ತಿದಾಯಕವೇ. ಅದನ್ನು ರೂಪಿಸಿರುವುದು ಎಲ್ಲ (ಒಳಾಂಗಣ,ಹೊರಾಂಗಣ ವಿನ್ಯಾಸದಿಂದ ಹಿಡಿದು ಎಲ್ಲವೂ) ಮರು ಬಳಕೆಯ ವಸ್ತುಗಳಿಂದ ಅಂದರೆ ತ್ಯಾಜ್ಯವೆಂದು ಪರಿಗಣಿತವಾದ ವಸ್ತುಗಳಿಂದ. ಅಲ್ಲಿ ಬರುವ ಪ್ರತಿ ಅತಿಥಿಗೂ ತಮ್ಮ ವಾಸ್ತವ್ಯದ ಅವಧಿಯ ಕಸ ವಿಂಗಡಣೆಗೆ ಬುಟ್ಟಿಗಳನ್ನು ಕೊಡಲಾಗುತ್ತದೆ. ಅದರಂತೆ ವಿಂಗಡನೆ ಮಾಡ ಬೇಕು. ಅವೆಲ್ಲವೂ ಶೂನ್ಯ ತ್ಯಾಜ್ಯದ ಕೇಂದ್ರವನ್ನು ತಲುಪಿ ಸಂಸ್ಕರಿಸಲ್ಪಡುತ್ತವೆ.
ಇದರಿಂದ ಮೂರು ಲಾಭ ಸಾಧನೆಯಾಯಿತು. ಒಂದೆಡೆ ಶೂನ್ಯ ತ್ಯಾಜ್ಯ, ಮತ್ತೂಂದೆಡೆ ಜನರಲ್ಲಿ ಹಣದ ಉಳಿತಾಯ, ಮೂರನೆಯದಾಗಿ ಸ್ಥಳೀಯ ಆಡಳಿತ ಕಸದ ವಿಲೇವಾರಿ ಮತ್ತು ನಿರ್ವಹಣೆಗೆ ವೆಚ್ಚ ಮಾಡಬೇಕಾದ ಅಪಾರ ಪ್ರಮಾಣದ ಹಣ ಅಭಿವೃದ್ಧಿಗೆ ಬಳಸಬಹುದಾದ ಸಾಧ್ಯತೆ ಸೃಷ್ಟಿಯಾ ಯಿತು. ಹಣವೆಂಬುದು ಹೊರ ಹೋಗದೇ ಊರಲ್ಲೇ ಸುತ್ತತೊಡಗಿತು. ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಅದೇ ಊರುಗೋಲಾಯಿತು.
ತಮ್ಮ ಊರಿಗೆ ಬೇಕಾದ ಪ್ರತಿಯೊಂದನ್ನೂ ಊರಲ್ಲೇ ಬೆಳೆಯಲು, ಉತ್ಪತ್ತಿ ಮಾಡಲು ಆರಂಭಿ ಸಿದ್ದು ತ್ಯಾಜ್ಯ ಉತ್ಪತ್ತಿಗಷ್ಟೇ ರಾಮಬಾಣವಾಗಲಿಲ್ಲ. ಬದಲಿಗೆ ಸ್ಥಳೀಯ ಆರ್ಥಿಕತೆಗೆ ಭೀಮ ಬಲ ಬಂದಿತು. ಅಗ್ಗ (ಹೊರಗಿನಿಂದ ತರುವ ಪ್ರಮಾಣಕ್ಕೆ ಹೋಲಿಸಿದಾಗ) ಮತ್ತು ಗುಣಮಟ್ಟದ ಉತ್ಪನ್ನಗಳು ನಾಗರಿಕರಿಗೆ ಲಭಿಸತೊಡಗಿದವು. ಹಣದ ಹರಿವಿಗೂ ಯಾವುದೇ ಧಕ್ಕೆಯಾಗಲಿಲ್ಲ. ಇದೇ ಸುಸ್ಥಿರತೆ ಎನ್ನುವುದು.
ನಮ್ಮ ಮನೆಯಲ್ಲೂ, ಊರಿನಲ್ಲೂ ಇಂಥ ದೊಂದು ಸಾಧನೆ ಸಾಧ್ಯವಿದೆ. ನಾವೆಲ್ಲ ಮನಸ್ಸು ಮಾಡಬೇಕಷ್ಟೇ. ಅಂದಹಾಗೆ ಪ್ರಸ್ತುತ ನಮ್ಮ ದೇಶದಲ್ಲಿ ದಿನಕ್ಕೆ 62 ಮಿಲಿಯನ್ ಮೆ. ಟನ್ ತ್ಯಾಜ್ಯ (ಘನ) ವಾರ್ಷಿಕವಾಗಿ ಉತ್ಪತ್ತಿಯಾಗುತ್ತಿದೆ. ರಾಜ್ಯದಲ್ಲಿ ನಿತ್ಯವೂ ಉತ್ಪತ್ತಿಯಾಗುತ್ತಿರುವ ಕಸದ ಪ್ರಮಾಣ ಸುಮಾರು 13 ಸಾವಿರ ಮೆ. ಟನ್‌ಗಳು. ಅದರ ಅರ್ಧದಷ್ಟು ಪ್ರಮಾಣ ವನ್ನು ಸಂಸ್ಕರಿಸಲು ಹೆಣಗಾಡುತ್ತಿದ್ದೇವೆ.
ನಾವೂ ಕಸದ ಉತ್ಪತ್ತಿಯ ಮೂಲದಲ್ಲೇ ಕೊಲ್ಲುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವುದೇ ಉಳಿದಿರುವ ಉಪಾಯ.
-ಅರವಿಂದ ನಾವಡ