ಪುತ್ತೂರು : ಏಳು ವರ್ಷಗಳ ಹಿಂದೆ ಕಾರ್ಯಾರಂಭಿಸಿದ 16 ಕೋ.ರೂ. ವೆಚ್ಚದ ಬಹು ನಿರೀಕ್ಷಿತ ಮಾಡಾವು 110 ಕೆ.ವಿ. ಸಬ್‌ಸ್ಟೇಷನ್ ಕಾಮಗಾರಿ ನಿರೀಕ್ಷಿತ ವೇಗ ಪಡೆದಿಲ್ಲ. ಇದರಿಂದಾಗಿ ಯೋಜನೆಯ ಪ್ರಯೋಜನ ಜನರಿಗೆ ದೊರೆಕಲು ಇನ್ನೂ ಎರಡು ವರ್ಷ ಕಾಯಬೇಕು.
Advertisement
ಸಬ್‌ಸ್ಟೇಷನ್ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ ಸಂಸ್ಥೆ ಕೆಲಸ ಆರಂಭಿಸದ ಕಾರಣ, ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಆರಂಭವೇ ಆಗಿಲ್ಲ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಪುತ್ತೂರು-ಸುಳ್ಯಕ್ಕೆ ವಿದ್ಯುತ್ ಒದಗಿಸುವ ಬನ್ನೂರಿನ 110 ಕೆ.ವಿ. ಸಬ್‌ಸ್ಟೇಷನ್ ಹೊರೆ ತಗ್ಗಿಸಲು ಮಾಡಾವಿ ನಲ್ಲಿ 110 ಕೆ.ವಿ. ಯೋಜನೆ ಅನುಷ್ಠಾನಿಸಲಾಗಿತ್ತು. 2010ರ ಎಪ್ರಿಲ್‌ನಲ್ಲಿ ಟೆಂಡರ್ ಪೂರ್ಣಗೊಂಡು, ಹೈದರಾಬಾದ್ ಮೂಲದ ಕಂಪೆನಿ ಕಾಮಗಾರಿ ವಹಿಸಿಕೊಂಡಿತ್ತು. ನೆಟ್ಲಮುಟ್ನೂರುವಿನಿಂದ ಕಬಕ – ಪುತ್ತೂರು-ಕುಂಬ್ರ-ತಿಂಗಳಾಡಿ ಮಾರ್ಗವಾಗಿ ಮಾಡಾವು 110 ಕೆ.ವಿ. ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದು. ಕಬಕದಿಂದ ಮಾಡಾವು ತನಕ 115 ಟವರ್, 27 ಕಿ.ಮೀ. ಮಾರ್ಗ ವಿಸ್ತರಣೆಗೆ ಉದ್ದೇಶಿಸಲಾಗಿತ್ತು. ಈ ಪೈಕಿ 104 ಸಬ್, 90 ಟವರ್ ಹಾಗೂ 14.7 ಕಿ.ಮೀ. ಮಾರ್ಗ ನಿರ್ಮಾಣವಾಗಿದೆ. ಉಳಿದ 11 ಸಬ್, 25 ಟವರ್ ಬಾಕಿ ಇದೆ. 110 ಕೆ.ವಿ. ಸ್ಥಾವರಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆದ ಸಂದರ್ಭ, ಕಾಮಗಾರಿ ಆರಂಭಿಸಬೇಕಾದ ಸ್ಥಳವನ್ನು ಅರಣ್ಯ ಇಲಾಖೆ ಹಸ್ತಾಂತರಿಸಲು ಮೂರು ವರ್ಷ ತೆಗೆದು ಕೊಂಡಿತ್ತು. ಹಾಗಾಗಿ ಈ ಹಿಂದಿನ ಮೊತ್ತಕ್ಕೆ ಹಳೆ ಗುತ್ತಿಗೆ ಸಂಸ್ಥೆ ಕಾಮಗಾರಿ ನಡೆಸಲು ಒಪ್ಪಲಿಲ್ಲ. ಹಾಗಾಗಿ ಕೆಪಿಟಿಸಿಎಲ್ ಗುತ್ತಿಗೆ ರದ್ದುಗೊಳಿಸಿತ್ತು. ಈಗ ಹೊಸ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದು ಇತ್ಯರ್ಥವಾದ ಬಳಿಕ ಕಾಮಗಾರಿ ಆರಂಭ ವಾಗಬೇಕಿದೆ. ಒಟ್ಟು 16.96 ಕೋ.ರೂ.ವೆಚ್ಚದ ಈ ಯೋಜನೆಯಲ್ಲಿ, 7.78 ಕೋ.ರೂ. ಲೈನ್ ಕಾಮಗಾರಿಗೆ ಹಾಗೂ 12.95 ಕೋ.ರೂ. ಸಬ್ ಸ್ಟೇಷನ್‌ಗೆ ಮೀಸಲಿಡಲಾಗಿದೆ. ಸುಮಾರು 7 ಕೋಟಿ ಪರಿಹಾರ ವಿತರಣೆಗೆ ಕಾದಿರಿಸಲಾಗಿದೆ.
Related Articles
ಪುತ್ತೂರು 110 ಕೆ.ವಿ. ಸಬ್‌ಸ್ಟೇಷನ್‌ನಿಂದ ಸುಳ್ಯ, ಕಡಬದ 33 ಕೆ.ವಿ. ಸಬ್ ಸ್ಟೇಷನ್‌ಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಮಾಡಾವು ಸಬ್‌ಸ್ಟೇಷನ್ ಪೂರ್ಣಗೊಂಡರೆ, ಪುತ್ತೂರು 110 ಕೆ.ವಿ. ಸಬ್ ಸ್ಟೇಷನ್ ಹೊರೆ ತಗಲುತ್ತದೆ.
Advertisement
ಪುತ್ತೂರು ತಾಲೂಕಿನ ಅಂಕತ್ತಡ್ಕ, ಮಾಡಾವು, ಕೆಯ್ಯೂರು, ಕುಂಬ್ರ, ತಿಂಗಳಾಡಿ, ಸುಳ್ಯ ತಾಲೂಕಿನ ಬೆಳ್ಳಾರೆ, ನೆಟ್ಟಾರು ಮೊದಲಾದ ಭಾಗಕ್ಕೆ ಮಾಡಾವು ಸಬ್‌ಸ್ಟೇಷನ್‌ನಿಂದ ವಿದ್ಯುತ್ ಪೂರೈಸಬಹುದು. ಇದರಿಂದ ಓವರ್‌ಲೋಡ್ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಆಕ್ಷೇಪಣೆ ಅರ್ಜಿ ಸಲ್ಲಿಕೆಪರಿಹಾರ ಹಾಗೂ ಸ್ಥಳದಲ್ಲಿ ಹಾದು ಹೋಗುವ ವಿಚಾರಕ್ಕೆ ಸಂಬಂಧಿಸಿ ಲೈನ್ ಹಾದು ಹೋಗುವ ಪ್ರದೇಶದ ಭೂ ಮಾಲಕರು ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಉಚ್ಚ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 6 ಅರ್ಜಿ ಸಲ್ಲಿಕೆ ಆಗಿವೆ. ಕೊಡಿಪ್ಪಾಡಿಯಲ್ಲಿ 2 ಹಾಗೂ ಆರ್ಯಾಪುವಿನಲ್ಲಿ 4 ಆಕ್ಷೇಪಣಾ ಅರ್ಜಿ ನ್ಯಾಯಾಲಯದ ಮೆಟ್ಟಿಲೇರಿದೆ. ಅವುಗಳ ವಿಚಾರಣೆ ಅನಂತರ ಆಕ್ಷೇಪಣೆ ಸಲ್ಲಿಕೆಯಾದ ಸ್ಥಳದಲ್ಲಿ ಕಾಮಗಾರಿ ಮುಂದುವರಿಸಬಹುದು. 85 ಶೇ. ಪೂರ್ಣ
ಉದ್ದೇಶಿತ ಮಾಡಾವು 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿಗೆ ಸಂಬಂಧಿಸಿ ಲೈನ್ ಮಾರ್ಗ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದೆ. ಸಬ್‌ಸ್ಟೇಷನ್ ನಿರ್ಮಾಣಕ್ಕೆ ಸಂಬಂಧಿಸಿ, ಹಳೆ ಗುತ್ತಿಗೆ ಸಂಸ್ಥೆ ಬದಲಾಯಿಸಲಾಗಿದ್ದು, ಹೊಸ ಗುತ್ತಿಗೆ ನೀಡಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಯೋಜನೆಗೆ ಸಂಬಂಧಿಸಿ ಆರು ಆಕ್ಷೇಪಣಾ ಅರ್ಜಿ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿಚಾರಣೆ ಹಂತದಲ್ಲಿದೆ.
– ಬಸವರಾಜ್
ಎ.ಇ. ಕೆಪಿಟಿಸಿಎಲ್, ಕಾವೂರು 47 ಲಕ್ಷ ಪರಿಹಾರ ವಿತರಣೆ
ಲೈನ್ ಹಾದು ಹೋಗುವ ಮಾರ್ಗದಲ್ಲಿ ರೈತರು ಪ್ರತಿ ರಬ್ಬರ್ ಗಿಡಕ್ಕೆ 12 ಸಾವಿರ ರೂ. ನಂತೆ ನೀಡಲು ಬೇಡಿಕೆ ಸಲ್ಲಿಸಿದ್ದರು. ಇದನ್ನು ಕೆಪಿಟಿಸಿಎಲ್ ಅನುಮೋದಿಸಿದೆ. ಪ್ರಸರಣಾ ಮಾರ್ಗದಲ್ಲಿ ಬರುವ ರಬ್ಬರ್ ಗಿಡಗಳಿಗೆ 4,02,36,000 ರೂ. ಹಾಗೂ ತೆಂಗು, ಅಡಿಕೆ ಮೊದಲಾದ ಮರಗಳ ಕಡಿಯಲು ಪರಿಹಾರ 3,76,95,500 ರೂ. ಗಳನ್ನು ನೀಡಬೇಕಿದೆ. ಗುತ್ತಿಗೆದಾರ ಸಂಸ್ಥೆ ಖರೀದಿ ಆದೇಶದ ನಿಯಮಾನುಸಾರ 47.87 ಲಕ್ಷ ರೂ. ಪರಿಹಾರ ವಿತರಿಸಿದೆ.