Advertisement
ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ವಿದ್ಯಾರ್ಥಿಗಳು ಕಾರ್ಯತತ್ಪರವಾಗಿದ್ದು ಅದರಲ್ಲಿ ಕೆಲವೊಂದು ಗ್ರಾಮಗಳು ಈಗಾಗಲೇ ಬಯಲು ಶೌಚಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ. ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸಹಕಾರದೊಂದಿಗೆ ವಿವಿಧ ಕಾಲೇಜುಗಳ ಎನ್‌ಎಸ್ ಎಸ್ ಘಟಕಗಳ ಅಡಿಯಲ್ಲಿ ವಿದ್ಯಾರ್ಥಿಗಳು ವಿವಿಧ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣದ ವಿಶೇಷ ಶಿಬಿರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
Related Articles
Advertisement
ಈಗಾಗಲೇ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಕಲಘಟಗಿಯ ಗುಡ್‌ನೂಸ್ ಕಾಲೇಜು, ಚನ್ನಾಪುರ ಗ್ರಾಮದಲ್ಲಿ ಕಲಘಟಗಿ ಸರಕಾರಿ ಕಾಲೇಜು, ಬ್ಯಾಹಟ್ಟಿ ಗ್ರಾಮದಲ್ಲಿ ಚೇತನಾ ಕಾಲೇಜ್, ರಾಯನಾಳದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ದೇವರಗುಡಿಹಾಳ ಗ್ರಾಮದಲ್ಲಿ ಡಾ| ಕೆ.ಎಸ್. ಶರ್ಮಾ ಕಾಲೇಜು, ಮಂಟೂರನಲ್ಲಿ ಡಾ|ಕೆ.ಎಸ್. ಶರ್ಮಾ ಕಲಾ ವಿಭಾಗದ ವಿದ್ಯಾರ್ಥಿಗಳು, ಹಳಾಳ ಗ್ರಾಮದಲ್ಲಿ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು,
ನೂಲ್ವಿಯಲ್ಲಿ ವುಮೆನ್ಸ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಕಾಲೇಜುಗಳು ನೂರಾರು ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಎನ್‌ಎಸ್‌ಎಸ್ ನಡೆ ಗ್ರಾಮ ನೈರ್ಮಲ್ಯದೆಡೆಗೆ, ಗ್ರಾಮ ಸ್ವತ್ಛತೆಯೇ ನಮ್ಮ ಆದ್ಯತೆ, ಬಯಲು ಶೌಚ ಮುಕ್ತ ಗ್ರಾಮ ನಮ್ಮ ಉದ್ದೇಶ ಎಂಬ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಶೌಚಾಲಯ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಹಿಳಾ ಕಾಲೇಜು ಭಾಗಿ: ಹುಬ್ಬಳ್ಳಿಯ ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಮಹಿಳಾ ಕಾಲೇಜು ಎನ್‌ಎಸ್‌ಎಸ್‌ನಡಿ ವಿದ್ಯಾರ್ಥಿನಿಯರು ನೂಲ್ವಿ ಗ್ರಾಮದಲ್ಲಿ ಬಯಲು ಶೌಚಮುಕ್ತ ಗ್ರಾಮ ಮಾಡುವಲ್ಲಿ ಶೌಚಾಲಯ ನಿರ್ಮಾಣ ಹಾಗೂ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ 200 ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಕನಿಷ್ಠ 120 ಶೌಚಾಲಯಗಳನ್ನಾದರೂ ನಿರ್ಮಾಣ ಮಾಡುತ್ತೇವೆ ಎಂಬುದು ವಿದ್ಯಾರ್ಥಿನಿಯರ ವಿಶ್ವಾಸ.
ಪದವಿ ಕಾಲೇಜು: ಕುಂದಗೋಳದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪಂಚಗ್ರಹ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಗೋಳದ ಸುಮಾರು 25 ವಿದ್ಯಾರ್ಥಿಗಳು ತಾಲೂಕಿನ ಕೊಟಗುಂಡ ಹುಣಸಿ ಗ್ರಾಮದಲ್ಲಿ ಶ್ರಮದಾನ ಮಾಡುವ ಮೂಲಕ ಗ್ರಾಮವನ್ನು ಶೌಚಮುಕ್ತ ಗ್ರಾಮ ಮಾಡುವಲ್ಲಿ ಮುಂದಾಗಿದ್ದಾರೆ.
ಈಗಾಗಲೇ ಗ್ರಾಮದಲ್ಲಿ ಸ್ವತ್ಛತೆ ಕುರಿತು ಜಾಗೃತಿ, ಬಯಲು ಶೌಚ ಮಾಡದಂತೆ ಗ್ರಾಮಸ್ಥರೊಂದಿಗೆ ಸಂವಾದ, ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಮಾಡುವ ಮೂಲಕ ಕೊಟಗುಂಡಹುಣಸಿ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮ ಮಾಡುವಲ್ಲಿ ಮುಂದಾಗಿದ್ದಾರೆ.
* ಬಸವರಾಜ ಹೂಗಾರ