ಗುಳ್ಳಕಾಯಜ್ಜಿ ಅಂದಾಕ್ಷಣ ನೆನಪೊಮ್ಮೆ ಪುರಾಣಕ್ಕೆ ಜಾರುತ್ತದೆ. ಚಾವುಂಡರಾಯ ಶೇಖರಿಸಿಟ್ಟ ಕೊಡಗಟ್ಟಲೆ ಹಾಲಿನಿಂದ ಗೊಮ್ಮಟನಿಗೆ ಅಭಿಷೇಕ ಮಾಡಿದರೂ, ಆತ ಪೂರ್ಣ ನೆನೆಯಲಿಲ್ಲ. ಆದರೆ, ದಟ್ಟ ಜನರ ನಡುವಿನಿಂದ ಬಂದ ಒಬ್ಬಳು ವೃದ್ಧೆ, ಗುಳ್ಳಕಾಯಿ ಗಾತ್ರದ ಮಡಿಕೆಯಲ್ಲಿ ತಂದಿದ್ದ ಹಾಲಿನಿಂದ ಮಾಡಿದ ಅಭಿಷೇಕದಿಂದ ಗೊಮ್ಮಟ ಮೂರ್ತಿಯ ಇಡೀ ವಿಗ್ರಹ ನೆನೆಯಿತು!
ನಂತರ ಆಕೆ ಗುಳ್ಳಕಾಯಿ ಅಜ್ಜಿ ಅಂತಲೇ ಜನಪ್ರಿಯಳಾಗುತ್ತಾಳೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರ “ಗುಳ್ಳಕಾಯಜ್ಜಿ’ ನಾಟಕವೂ ಈ ಅಜ್ಜಿಯ ಬದುಕಿನ ಸುತ್ತಮುತ್ತ ಹೊರಳುವಂಥದ್ದು.
ಆ ನಾಟಕವೀಗ ರಂಗಪ್ರಯೋಗಗೊಳ್ಳುತ್ತಿದೆ. ಮಾಲತೇಶ ಬಡಿಗೇರ ಇದನ್ನು ನಿರ್ದೇಶಿಸಿದ್ದಾರೆ. ವಿನಯ್ ಚೌಹಾಣ್ ಬೆಳಕು ಸಂಯೋಜಿಸಿದ್ದರೆ, ಸಿದ್ದರಾಮಕೇಸಾಪುರ ಸಂಗೀತ ನೀಡಿದ್ದಾರೆ. ರಾಷ್ಟ್ರೀಯ ನಾಟಕಶಾಲೆ ವಿದ್ಯಾರ್ಥಿಗಳು ಅಭಿನಯಿಸುತ್ತಿರುವ ಈ ನಾಟಕ 3 ದಿನ ಪ್ರದರ್ಶನ ಕಾಣಲಿದೆ.
ಯಾವಾಗ?: ಡಿ.16, 17, 18, ಸಂಜೆ 7ಕ್ಕೆ
ಎಲ್ಲಿ?: ಎನ್‌ಎಸ್‌ಡಿ ಸ್ಟುಡಿಯೋ ಥಿಯೇಟರ್, ಕಲಾಗ್ರಾಮ, ಮಲ್ಲತ್ತಹಳ್ಳಿ