Advertisement
ಭೂಮಾಪನ ಇಲಾಖೆ ಸರ್ವೆ ಪ್ರಕಾರ ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು ಸೇರಿ ಜಿಲ್ಲೆಯಲ್ಲಿ710ಕೆರೆಗಳಿದ್ದು, ಅದರಲ್ಲಿ 643 ಕೆರೆಗಳು ಒತ್ತುವರಿಯಾಗಿವೆ. 6,252 ಎಕರೆ 19 ಗುಂಟೆ ಕೆರೆಗಳ ವಿಸ್ತೀರ್ಣ ಒತ್ತುವರಿಯಾಗಿದೆ. ಅದರಲ್ಲಿ 5,189 ಎಕರೆಯಷ್ಟು ಖಾಸಗಿ ಒತ್ತುವರಿ ಹಾಗೂ 1,063 ಎಕರೆಯಷ್ಟು ಸರ್ಕಾರಿ ಒತ್ತುವರಿಯಾಗಿದೆ. ಮಳೆ ಹೆಚ್ಚಾದರೂ ಕೆರೆಗಳಲ್ಲಿ ನೀರಿಲ್ಲ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು 1,200 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಉತ್ತಮ ಮಳೆಯಾದರೂ ಸಹ ಕೆರೆಗಳಿಗೆ ನೀರು ಭರ್ತಿಯಾಗುತ್ತಿಲ್ಲಜನವರಿಯಿಂದ ಅಕ್ಟೋಬರ್ 9 ವರೆಗೆ ವಾಡಿಕೆ ಮಳೆಯು 688 ಮಿ.ಮಿ ಗುರಿಗೆ 808ಮಿಮಿ ಮಳೆಯಾಗಿದೆ. ಶೇಕಡಾ 18ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಆದರೂ ಸಹ ಕೆರೆಗಳಲ್ಲಿ ಮತ್ತು ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ.
Related Articles
Advertisement
ಒತ್ತುವರಿ ತೆರವುಗೊಳಿಸಲಿ: ರಾಜಕಾಲುವೆಗಳು ಸಹ ಒತ್ತುವರಿ ಆಗಿರುವುದರಿಂದ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿಯದೆ ಪೋಲಾಗುತ್ತಿದೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿದರೆ, ಕೆರೆಗೆ ಸಮೃದ್ಧವಾಗಿ ನೀರು ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ ರಾಜಕಾಲೂವೆ ಮತ್ತು ಕೆರೆಗಳ ಒತ್ತುವರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜಿಲ್ಲಾಡಳಿತ ತಹಶೀಲ್ದಾರ್‌ಗಳ ಮೂಲಕ ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾ ಗಬೇಕಿದೆ. ಹಸಿರು ನ್ಯಾಯಾಧಿಕರಣದ ಆದೇಶಕ್ಕೆ ಅನುಗುಣವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಾಗದ ಕೊರತೆ ಎದ್ದುಕಾಣುತ್ತಿದೆ. ಇರುವ ಜಾಗಗಳನ್ನು ಗುರುತಿಸಿ ಕೆರೆ ಅಭಿವೃದ್ಧಿಗೊಳಿಸಲುಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಹೊಸಕೋಟೆ ತಾಲೂಕಿಗೆ ಕೆ.ಸಿ.ವ್ಯಾಲಿ ನೀರು ಬಿಡುಗಡೆ : ಕೇಂದ್ರ ಸರ್ಕಾರ ಅಟಲ್ ಭೂ ಜಲ ಯೋಜನೆಯಡಿ ರಾಜ್ಯದ45 ತಾಲೂಕುಗಳಲ್ಲಿಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಅದರಲ್ಲಿ ಬರಪೀಡಿತವಾಗಿರುವ ಜಿಲ್ಲೆಯು ಎಲ್ಲಾ ತಾಲೂಕುಗಳನ್ನು ಸೇರಿಸಬೇಕಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ನಗರದ ಹೆಬ್ಟಾಳ ಮತ್ತು ನಾಗವಾರಕೆರೆಗಳಿಂದ ಶುದ್ಧಕರಿಸಿ ದೇವನಹಳ್ಳಿ ತಾಲೂಕಿನ9 ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಗತಿಯಲ್ಲಿದ್ದು, ಈಗ3 ರಿಂದ4 ಕೆರೆಗಳಿಗೆ ನೀರು ಬಿಡಲಾಗಿದೆ. ಹೊಸಕೋಟೆ ತಾಲೂಕಿಗೆಕೆ.ಸಿ. ವ್ಯಾಲಿ ನೀರು ಬಿಡಲಾಗುತ್ತಿದೆ.
ಬ್ರಿಟಿಷರ ಕಾಲದಿಂದಲೂ ಕೆರೆ, ಗುಂಡುತೋಪು, ಗೋಮಾಳ, ಇತರೆ ಜಾಗಗಳು ಒತ್ತುವರಿಯಾಗುತ್ತಲೇ ಇವೆ. ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರುಕೆರೆಗಳಿಗೆ ಬಂದು ಸೇರಲು ಅಡೆತಡೆಯಾಗುತ್ತಿದೆ. ಅಧಿಕಾರಿಗಳು ಒತ್ತುವರಿ ತೆರವುಗೊಳಿಸದೇ ಕೇವಲ ಸರ್ವೆ ಕಾರ್ಯದಲ್ಲಿಯೇ ಮಗ್ನರಾಗಿದ್ದಾರೆ. – ಆಂಜಿನಪ್ಪ, ಸಾಮಾಜಿಕ ಕಾರ್ಯಕರ್ತ
ಜಿಲ್ಲೆಯಕೆರೆಗಳ ನೀಲನಕ್ಷೆ ತಯಾರಿಸಿ ಮಾಹಿತಿ ಕ್ರೂಢೀಕರಿಸುತ್ತಿದ್ದೇವೆ. ಸರ್ವೆ ಇಲಾಖೆ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ಮಾಡಿ ಹದ್ದುಬಸ್ತು ಮಾಡಿಸಲಾಗುತ್ತಿದೆ. ಸಿಎಸ್‌ಆರ್ ಅನುದಾನದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಹಾಗೂ ಜಿಲ್ಲಾಡಳಿತದಿಂದ ಕೆರೆಗಳ ಒತ್ತುವರಿ ತೆರವಿಗೆ ಸೂಕ್ತಕ್ರಮಕೈಗೊಳ್ಳಲಾಗುವುದು. – ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿಕೆರೆಗಳ ಅಭಿವೃದ್ಧಿಗೆ 120 ಕೋಟಿ ರೂ. ಗೂ ಹೆಚ್ಚು ಅನುದಾನವಿದ್ದು, 2014ರಲ್ಲಿ 24 ಕೋಟಿ ರೂ.ಕೆರೆಗಳಕ್ರಿಯಾ ಯೋಜನೆಯಾಗಿದ್ದು, ಇದುವರೆಗೂ ಸರ್ಕಾರದ ಮಟ್ಟದಲ್ಲಿ ಅನುಮೋದನೆಯಾಗಿಲ್ಲ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆಕಾರಣವಾಗಿದೆ. ಈ ಅನುದಾನ ಬಳಸಿಕೊಂಡುಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕು. – ಚಿಕ್ಕೇಗೌಡ ಗ್ರಾಮಸ್ಥ
–ಎಸ್.ಮಹೇಶ್