ಮೈದಾ ಹಿಟ್ಟು: ಅರ್ಧ ಕೆ.ಜಿ.
ತುಪ್ಪ: 4 ಚಮಚ
ಜೀರಿಗೆ: 1 ಚಮಚ
ಓಂಕಾ ಳು: 1 ಚಮಚ
ಎಳ್ಳು: 2 ಚಮಚ
ಕೆಂಪು ಮೆಣಸಿನ ಹುಡಿ: 2 ಚಮ ಚ
ಉಪ್ಪು: ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ:ಮೈದಾ ಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಅನಂತರ ಹಿಟ್ಟನ್ನು ಒಂದು ಬಿಳಿಯ ಹತ್ತಿ ಬಟ್ಟೆಯಲ್ಲಿ ಕಟ್ಟಿ ಉಗಿಯಲ್ಲಿ 10 ನಿಮಿಷ ಬೇಯಿಸಬೇಕು. ಬಳಿ ಕ ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ ಅದನ್ನು ಪುಡಿ ಮಾಡಿಕೊಳ್ಳಬೇಕು. ಬಳಿಕ ಹಿಟ್ಟಿಗೆ ಬಿಸಿ ಮಾಡಿದ ತುಪ್ಪ, ಜೀರಿಗೆ, ಓಂಕಾಳು, ಎಳ್ಳು, ಕೆಂಪು ಮೆಣಸಿನಪುಡಿ, ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಕಲಸಿಕೊಳ್ಳಬೇಕು. ಬಳಿಕ ಚಕ್ಕುಲಿ ಮಾಡುವ ಅಚ್ಚಿನಲ್ಲಿ ಹಾಕಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಚೆನ್ನಾಗಿ ಹೊಂಬಣ್ಣ ಬರುವವರೆಗೆ ಕಾಯಿಸಬೇಕು.
ಮಂಗಳೂರು