Advertisement

Pakistan Cricket Board: ಪಾಕ್‌ ಕ್ರಿಕೆಟ್‌ ಸ್ಟೇಡಿಯಂ ನವೀಕರಣಕ್ಕೆ ದೊಡ್ಡ ಮೊತ್ತ

07:38 PM Sep 14, 2024 | Team Udayavani |

ಕರಾಚಿ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಪಂದ್ಯಾವಳಿಗಾಗಿ ಪಾಕಿಸ್ಥಾನದ ಲಾಹೋರ್‌, ಕರಾಚಿ ಮತ್ತು ರಾವಲ್ಪಿಂಡಿ ಕ್ರಿಕೆಟ್‌ ಮೈದಾನಗಳು ನವೀಕರಣಗೊಳ್ಳಲಿವೆ.

Advertisement

ಇದಕ್ಕೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ 1,280 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಲಾಹೋರ್‌ನ ಗದ್ದಾಫಿ ಮೈದಾನಕ್ಕೆ ಸಿಂಹಪಾಲು ಸಿಗಲಿದೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ತಿಳಿಸಿದ್ದಾರೆ.

ಕ್ರಿಕೆಟ್‌ ಮೈದಾನಗಳ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿರುವ 1,280 ಕೋಟಿ ರೂ. ಹಣದಲ್ಲಿ 770 ಕೋಟಿ ರೂ. ಮೊತ್ತವನ್ನು ಗದ್ದಾಫಿ ಮೈದಾನಕ್ಕೆ ವ್ಯಯಿಸಲಾಗುವುದು. ಬಹು ನಿರೀಕ್ಷಿತ ಪಂದ್ಯಾವಳಿ ವೇಳೆ ಕಾಮಗಾರಿಯೆಲ್ಲ ಪೂರ್ಣಗೊಳ್ಳಲಿದೆ ಎಂದು ನಖ್ವಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next