Advertisement

ಮಹೇಶ್‌ ಬಾಬು ಪುತ್ರಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ತೆರೆದು ವಂಚನೆಯ ಸಂದೇಶ

01:13 PM Feb 10, 2024 | Team Udayavani |

ಹೈದರಾಬಾದ್: ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ಪುತ್ರಿಯ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು  ನಕಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ತೆರೆದು ವಂಚನೆಯ ಸಂದೇಶ ಕಳುಹಿಸಿರುವ ಕುರಿತು ಹೈದರಾಬಾದ್ ನ ಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಟ ಮಹೇಶ್‌ ಬಾಬು ಅವರ ಪುತ್ರಿ ಸಿತಾರ ಘಟ್ಟಮನೇನಿ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರ ತಂದೆ ʼಗುಂಟೂರು ಖಾರಂʼ ಸಿನಿಮಾ ಪ್ರಚಾರವನ್ನು ಮಾಡಿದ ಪೋಸ್ಟ್‌ ಗಳನ್ನು ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದರು. ಇದೀಗ ಕೆಲ ಅಪರಿಚಿತ ವ್ಯಕ್ತಿಗಳು ಸಿತಾರ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ತೆರೆದು ವಂಚನೆಯ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎನ್ನುವುದರ ಕುರಿತು ದೂರು ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಸಿತಾರಾ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು, ಫಾಲೋವರ್ಸ್‌ ಗಳಿಗೆ ವ್ಯಾಪಾರ ಮತ್ತು ಹೂಡಿಕೆಯ ಲಿಂಕ್‌ ಗಳನ್ನು ಕಳುಹಿಸುತ್ತಿದ್ದಾರೆ. ಈ ಬಗ್ಗೆ ಮಾದಾಪುರ ಠಾಣೆಯಲ್ಲಿ ದೂರು ನೀಡಲಾಗಿದೆ. @sitaraghattamaneni ಇದು ಅವರ ಅಧಿಕೃತ ಖಾತೆಯಾಗಿದ್ದು, ಉಳಿದ ಖಾತೆ ನಂಬಲು ಅರ್ಹವಲ್ಲವೆಂದು ಮಹೇಶ್‌ ಬಾಬು ಪ್ರೊಡಕ್ಷನ್‌ ಹೌಸ್ ಜಿಎಂಬಿ ಎಂಟರ್‌ಟೈನ್‌ಮೆಂಟ್ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next