Advertisement

ಹೊಸಬರ ಜೊತೆ ಮಹೇಶ್‌ ಬಾಬು

09:32 AM Apr 04, 2019 | Lakshmi GovindaRaju |

ನಿರ್ದೇಶಕ ಮಹೇಶ್‌ ಬಾಬು ಅವರ ಹೊಸ ಚಿತ್ರ ಸದ್ದಿಲ್ಲದೇ ಆರಂಭವಾಗಿದೆ ಎನ್ನುವ ಸುದ್ದಿಯನ್ನು ಕೆಲ ಸಮಯದ ಹಿಂದೆ ಇದೇ ಬಾಲ್ಕನಿಯಲ್ಲಿ ನೋಡಿರುತ್ತೀರಿ. ಈಗ ಈ ಚಿತ್ರದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಈ ಚಿತ್ರಕ್ಕೆ ಈಗ ಟೈಟಲ್‌ ಫಿಕ್ಸ್‌ ಆಗಿದೆ.

Advertisement

ಹೌದು, ಮಹೇಶ್‌ ಬಾಬು ತಮ್ಮ ನಿರ್ದೇಶನದ ಹೊಸಚಿತ್ರಕ್ಕೆ “ಅಪರೂಪ’ ಎನ್ನುವ ಟೈಟಲ್‌ ಇಟ್ಟಿದ್ದಾರೆ. ಎಂದಿನಂತೆ ಈ ಚಿತ್ರದಲ್ಲೂ ಮಹೇಶ್‌ ಬಾಬು ಮತ್ತೆ ಒಂದಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆಯಲ್ಲಿದ್ದಾರೆ.

ಈ ಚಿತ್ರದ ಮೂಲಕ ನಾಯಕನಾಗಿ ಸುಘೋಷ್‌ ಮತ್ತು ನಾಯಕಿಯಾಗಿ ಕೃತಿಕಾ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಜುಲೈ ವೇಳೆಗೆ ಅಪರೂಪ ‘ ಚಿತ್ರ ತೆರೆಗೆ ಬರಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next