ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟು ಹಬ್ಬ ಇದೇ ಆಗಸ್ಟ್ 9 ಇದೆ. ಇದೇ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ.
ಹೌದು ಹುಟ್ಟು ಹಬ್ಬದ ಬಗ್ಗೆ ಬರೆದುಕೊಂಡಿರುವ ಮಹೇಶ್ ಬಾಬು, ನನ್ನ ಪ್ರೀತಿಯಅಭಿಮಾನಿಗಳೇ. ನನ್ನ ಹುಟ್ಟಿದ ಹಬ್ಬದ ದಿನವಾಗಿರುವ ಆ.9ರಂದು ಮೂರು ಗಿಡಗಳನ್ನು ನೆಡಬೇಕು’ಎಂದು ತೆಲುಗು ಚಿತ್ರನಟ, ಪ್ರಿನ್ಸ್ ಮಹೇಶ್‌ಬಾಬು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಆ.9ರಂದು ಪ್ರಿನ್ಸ್ 46ನೇ ಹುಟ್ಟಿದ ಹಬ್ಬಆಚರಿಸಿ ಕೊಳ್ಳಲಿದ್ದಾರೆ. ತಮ್ಮಆಶಯದ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿಬರೆದುಕೊಂಡಿದ್ದಾರೆ. ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣಮಾಡುವುದಕ್ಕೆ ನೆರವಾಗಬೇಕು ಎಂದು ಹೇಳಿದ್ದಾರೆ.
ಅವರು ತಮ್ಮ ಪುತ್ರಿಯ ಜತೆಗೆ ಗಿಡ ನೆಡುವ ಫೋಟೋವನ್ನುಅಪ್‌ಲೋಡ್ ಮಾಡಿದ್ದಾರೆ. ಪ್ರಸಕ್ತ ವರ್ಷಅವರಹೊಸ ಸಿನಿಮಾ”ಮೇಜರ್’ ತೆರೆ ಕಾಣುವ ಸಾಧ್ಯತೆಗಳು ಇವೆ.