Advertisement

MAHE; ಎಫ್ಐಸಿಸಿಐ ‘ವರ್ಷದ ಅತ್ಯುತ್ತಮ ವಿವಿ ಪ್ರಶಸ್ತಿ’ ಪಡೆದ ಮಾಹೆ

08:44 PM Oct 19, 2024 | Team Udayavani |

ಮಣಿಪಾಲ: 19 ನೇ ಎಫ್ಐಸಿಸಿಐ  ಉನ್ನತ ಶಿಕ್ಷಣ ಶೃಂಗಸಭೆ 2024 ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಗೆ (MAHE) ಪ್ರತಿಷ್ಠಿತ ”ಎಫ್ ಐಸಿಸಿಐ ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Advertisement

ನವದೆಹಲಿಯ ಅಂಬೇಡ್ಕ ರ್ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ  ಭಾರತದ ಬ್ರಿಟಿಷ್ ಹೈ ಕಮಿಷನರ್ ಲಿಂಡಿ ಕ್ಯಾಮರೂನ್, ಎಫ್ಐಸಿಸಿಐ ಯ ಮಹಾನಿರ್ದೇಶಕರಾದ ಜ್ಯೋತಿ ವಿಜ್, ಮತ್ತು ಸಿಂಬಯೋಸಿಸ್ ಇಂಟರ್‌ನ್ಯಾಶನಲ್ ಯೂನಿವರ್ಸಿಟಿಯ ಸಹಕುಲಾಧಿಪತಿ  ಡಾ.ವಿದ್ಯಾ ಯರ್ವಾಡೇಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಹೆ  ಪರವಾಗಿ ಸಹ ಕುಲಪತಿ(ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್ ಅವರು ಮಾಹೆಯ ವಿಶೇಷ ನಿಯೋಗದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ನಿಯೋಗದಲ್ಲಿಎಂಐಟಿ ಮಣಿಪಾಲದ ಪ್ರೊ.ವಿನೋದ್ ಕಾಮತ್, ಟ್ಯಾಪ್ಮಿ ಮಣಿಪಾಲದ ಡಾ.ಗುರುದತ್ ನಾಯಕ್, ಹಿಲ್ಡಾ ಕರ್ನೆಲಿಯೊ, ಮಾಹೆ ಮಣಿಪಾಲ ಮಾರ್ಕೆಟಿಂಗ್ ಸಹಾಯಕ ನಿರ್ದೇಶಕಿ ಅರ್ಚನಾ ನಾಯಕ್ ಮತ್ತು ಮಾಹೆ ಬೆಂಗಳೂರಿನ ಸಹಾಯಕ ನಿರ್ದೇಶಕಿ ದಿವ್ಯ ದರ್ಶಿನಿ ಕೆ. ಉಪಸ್ಥಿತರಿದ್ದರು.

ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಪ್ರಶಸ್ತಿ ಪಡೆದ ಕುರಿತು ಸಂತಸ ಹಂಚಿಕೊಂಡಿದ್ದು “ಮಾಹೆಯಲ್ಲಿ, ನಾವು ಜ್ಞಾನವನ್ನು ನೀಡುವುದರ ಜತೆಗೆ ಜಗತ್ತಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಬಲ್ಲ ವ್ಯಕ್ತಿಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತೇವೆ. ಈ ಪ್ರಶಸ್ತಿಯು ನಮ್ಮಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಂಸ್ಥೆಯನ್ನು ಮುನ್ನಡೆಸುವ ದೃಷ್ಟಿಕೋನ ಮತ್ತು ನಾಯಕತ್ವವು ನಮ್ಮ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬಂದಿಗಳಿಗೆ ಅರ್ಪಿಸುತ್ತೇವೆ. ಅವರ ಸಮರ್ಪಣೆ ಮತ್ತು ಪರಿಶ್ರಮವು ಮಾಹೆಯನ್ನು ಜಾಗತಿಕ ಖ್ಯಾತಿಯ ಸಂಸ್ಥೆಯನ್ನಾಗಿ ಮಾಡಿದೆ” ಎಂದರು.

ಉಪಕುಲಪತಿ  ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಸಂಭ್ರಮ ಹಂಚಿಕೊಂಡು “ಈ ಪ್ರಶಸ್ತಿಯು ಪ್ರತಿಯೊಬ್ಬ ಸದಸ್ಯರ ಅವಿರತ ಶ್ರೇಷ್ಠತೆಯ ಅನ್ವೇಷಣೆಗೆ ಸಾಕ್ಷಿಯಾಗಿದೆ. ಮಾಹೆ ಸಮುದಾಯದ ನಾವೀನ್ಯತೆ, ಸಂಶೋಧನೆ ಮತ್ತು ಶೈಕ್ಷಣಿಕಪ್ರತಿಭೆಯನ್ನು ಬೆಳೆಸುವ ನಮ್ಮ ಬದ್ಧತೆಯು ಎಫ್ ಐ ಸಿ ಸಿ ಐ  ಯಿಂದಗುರುತಿಸಲ್ಪಟ್ಟಿರುವುದಕ್ಕೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತುಈ ಪುರಸ್ಕಾರವು ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನುಸ್ಥಾಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ.ಶೈಕ್ಷಣಿಕ ಉತ್ಕೃಷ್ಟತೆ, ನವೀನ ಅಭ್ಯಾಸಗಳು, ಅಧ್ಯಾಪಕರ ಅಭಿವೃದ್ಧಿ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ ಮತ್ತು ಸಮಾಜದ ಬೆಳವಣಿಗೆಗೆಕೊಡುಗೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ವಿಶ್ವವಿದ್ಯಾಲಯಗಳನ್ನು ಪ್ರಶಸ್ತಿಗುರುತಿಸುತ್ತದೆ. ಸಂಶೋಧನೆ, ಜಾಗತಿಕ ಸಹಯೋಗಗಳು ಮತ್ತುಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹೆಯ ನಿರಂತರದಾಪುಗಾಲುಗಳು ಈ ಪ್ರತಿಷ್ಠಿತ ಪುರಸ್ಕಾರವನ್ನು ಗಳಿಸುವಲ್ಲಿ ಮಹತ್ವದಪಾತ್ರವನ್ನು ವಹಿಸಿವೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next