Advertisement

ಕೆನಡ ಪ್ರಧಾನಿಯಿಂದ ಮಾಹೆ ಪ್ರತಿನಿಧಿಗಳಿಗೆ ಸ್ವಾಗತ

12:24 AM Aug 06, 2023 | Team Udayavani |

ಮಣಿಪಾಲ: ನರ್ಸಿಂಗ್‌ ಪ್ರಿಸೆಪ್ಟರ್‌ಶಿಪ್‌ ಕಾರ್ಯಕ್ರಮ ಸಂಬಂಧ ಕೆನಡದ ನ್ಯೂ ಬ್ರನ್ಸ್‌ವಿಕ್‌ ವಿಶ್ವವಿದ್ಯಾಲಯದೊಂದಿಗೆ ಜಾಗತಿಕ ಶೈಕ್ಷಣಿಕ ಒಡಬಂಡಿಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಕೆನಡ ದೇಶಕ್ಕೆ ಪ್ರವಾಸ ಬೆಳೆಸಿರುವ ಮಾಹೆ ವಿ.ವಿ.ಯ ಪ್ರತಿನಿಧಿಗಳನ್ನು ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರೂಡಿಯು ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಮಾಹೆಯ ಮಣಿಪಾಲ ಕಾಲೇಜ್‌ ಆಫ್ ನರ್ಸಿಂಗ್‌ ಮತ್ತು ನ್ಯೂ ಬ್ರನ್ಸ್‌ವಿಕ್‌ ವಿ.ವಿ.ಯ ನಡುವೆ ಸಂಶೋಧನಾತ್ಮಕ ಡ್ನೂವೆಲ್‌ ಬಿ.ಎಸ್ಸಿ. ನರ್ಸಿಂಗ್‌ ಕೋರ್ಸ್‌ಗಳನ್ನು ಎರಡು ವಿ.ವಿ.ಗಳು ಒಟ್ಟಾಗಿ ನಡೆಸುವ ಸಂಬಂಧ ಒಪ್ಪಂದದ ಹಿನ್ನೆಲೆಯಲ್ಲಿ ಮಾಹೆ ಪ್ರತಿನಿಧಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ.

Advertisement

ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರೂಡಿಯು ಅವರು ಮಾತನಾಡಿ, ಈ ಒಡಂಬಡಿಕೆಯು ಜ್ಞಾನ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಎಲ್ಲಿದ್ದೇವೋ ಅಲ್ಲಿಂದಲೆ ಕಲಿಯಲು ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ಎರಡು ದೇಶದ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಇನ್ನಷ್ಟು ಉಪಯೋಗವಾಗಲಿದೆ. ಉತ್ಕೃಷ್ಟ ಗುಣಮಟ್ಟದ ಅಂತಾರಾಷ್ಟ್ರೀಯ ಶಿಕ್ಷಣವು ವಿದ್ಯಾರ್ಥಿಗಳಿಗೆ ಇದರಿಂದ ಲಭ್ಯವಾಗಲಿದೆ ಎಂದರು.

ಆ. 8ರಂದು ಪ್ರಿಸೆಪ್ಟರ್‌ಶಿಪ್‌ ಒಪನಿಂಗ್‌ ಕಾರ್ಯಕ್ರಮ ನಡೆಯಲಿದೆ. ನ್ಯೂ ಬ್ರನ್ಸ್‌ವಿಕ್‌ ಸರಕಾರವು ಇದಕ್ಕೆ ಬೆಂಬಲ ಸೂಚಿಸಿದ್ದು ಅಧ್ಯಕ್ಷ ಮಝೆರೊಲ್ಲೆ ಅವರು ಭಾಗವಹಿಸಲಿದ್ದಾರೆ ಎಂದು ಮಾಹೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next