Advertisement
ದೂರ ದೃಷ್ಟಿಯುಳ್ಳ ಪ್ರಬುದ್ಧ ವ್ಯಕ್ತಿತ್ವದ ಡಾ| ಟಿಎಂಎ ಪೈ ಅವರು 1942ರಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆರಂಭಿಸಿ, ವಾಣಿಜ್ಯ ಮತ್ತು ತಾಂತ್ರಿಕ ಶಿಕ್ಷಣ ಲಭ್ಯ ವಾಗು ವಂತೆ ಮಾಡಿದರು. ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ನೆರವಾ ಗುವ ತರಬೇತಿಗಳನ್ನು ಆರಂಭಿಸಿದರು. 1953ರಲ್ಲಿ ದೇಶದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜನ್ನು ಆರಂಭಿಸಿದರಲ್ಲದೇ ಎಂಜಿನಿಯರಿಂಗ್, ದಂತವೈದ್ಯಕೀಯ, ಫಾರ್ಮಸಿ, ಆರ್ಕಿಟೆಕ್ಟ್, ಕಾನೂನು, ಶಿಕ್ಷಣ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಮ್ಯಾನೇಜ್‌ಮೆಂಟ್ ಕಾಲೇಜುಗಳನ್ನು ಆರಂಭಿಸಿದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜ್ ದೇಶದ ಅಗ್ರ 10 ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ ಎಂದು ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ 5 ವರ್ಷಗಳ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡಿ ದ್ದೇವೆ. 12 ಕೋರ್ಸ್ ಗಳನ್ನು 3 ವರ್ಷದಿಂದ 4 ವರ್ಷಕ್ಕೆ ವಿಸ್ತರಿಸಿದ್ದೇವೆ. 45ಕ್ಕೂ ಅಧಿಕ ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಗುಣಮಟ್ಟದ ಕಲಿಕೆಯ ಜತೆಗೆ ಉತ್ಕೃಷ್ಟ ಬೋಧನೆಗೆ ಅನುಕೂಲವಾಗುವಂತೆ ಸಮರ್ಥ ಬೋಧನಾ ವರ್ಗವನ್ನು ಹೊಂದಿದ್ದೇವೆ. ಕೋವಿಡ್ ಬಗ್ಗೆ ಚರ್ಚೆಯಲ್ಲಿ ರುವ ಹಲವು ವಿಷಯಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಿದ್ದೇವೆ ಎಂದರು.
Related Articles
Advertisement
ಇದನ್ನೂ ಓದಿ: ಪರೇಶ ಮೇಸ್ತ ಪ್ರಕರಣ; ಬಿ ರಿಪೋರ್ಟ್‌ಗೆ ತಂದೆ ಕಮಲಾಕರ ಆಕ್ಷೇಪಣೆ ಸಲ್ಲಿಕೆ
30ನೇ ಘಟಿಕೋತ್ಸವನ. 18ರ ಮಧ್ಯಾಹ್ನ 2ಕ್ಕೆ ಆರಂಭವಾಗುವ ಮಾಹೆಯ 30ನೇ ಘಟಿಕೋತ್ಸವದಲ್ಲಿ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ನಾಸಿಕ್‌ನಲ್ಲಿರುವ ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನ ಕುಲಪತಿ ಲೆ| ಜ| ಡಾ| ಮಾಧುರಿ ಕಾನಿಟ್ಕರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. 33 ಪಿಎಚ್.ಡಿ. ಸಹಿತ 1,680 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ನ. 19ರಂದು ಕೇಂದ್ರ ರಕ್ಷಣ ಸಚಿವರ ವೈಜ್ಞಾನಿಕ ಸಲಹಗಾರ ಡಾ| ಜಿ. ಸತೀಶ್ ರೆಡ್ಡಿ ಭಾಗವಹಿಸಲಿದ್ದು 79 ಪಿಎಚ್.ಡಿ. ಸಹಿತ 1,648 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ನ. 20ರಂದು ಆ್ಯಕ್ಸಿಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಅಮಿತಾಭ್ ಚೌಧರಿ ಭಾಗವಹಿಸಲಿದ್ದು 26 ಪಿಎಚ್.ಡಿ. ಸಹಿತ 1,643 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಡಾ| ನಾರಾಯಣ ಸಭಾಹಿತ್ ಅವರು ವಿವರ ನೀಡಿದರು. ಸಂಪೂರ್ಣ ಡಿಜಿಟಲ್
ಮಾಹೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಪೇಪರ್ ಮೇಲೆ ಬರೆಯುವ ವ್ಯವಸ್ಥೆ ಈಗ ಇಲ್ಲ. ಸಂಪೂರ್ಣ ಡಿಜಿಟಲ್ ಮಾಡಿದ್ದೇವೆ. ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಪರೀಕ್ಷೆ ಬರೆಯಲಿದ್ದಾರೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲೇ ಇರಲಿವೆ ಎಂದ ಅವರು, ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕಗಳ ಚೌಕಟ್ಟು(ಎನ್‌ಐಆರ್‌ಎಫ್)-2022ರ ಪ್ರಕಾರ ವಿ.ವಿ.ಗಳ ವಿಭಾಗದಲ್ಲಿ ಮಾಹೆ ಏಳನೇ ಸ್ಥಾನ ಪಡೆದಿದೆ. ವಿವಿಧ ಶೈಕ್ಷಣಿಕ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. 3,000ಕ್ಕೂ ಅಧಿಕ ಸಂಶೋಧನ ಪ್ರಬಂಧಗಳನ್ನು ಮಂಡಿಸಲಾಗಿದೆ. ಜೆಮ್ಶೆಡ್‌ಪುರದಲ್ಲಿ ಟಾಟಾ ಸಂಸ್ಥೆಯ ಜತೆ ಸೇರಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಆರಂಭಿಸಿದ್ದೇವೆ ಎಂದು ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಹೇಳಿದರು.