Advertisement
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಮಠದಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದದ ೭ ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಠದಲ್ಲಿ ನೂತನವಾಗಿ ೪ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮತಿ ರಂಗಲಕ್ಷ್ಮೀ ಶ್ರೀ ಎನ್. ದೇವರಾಜಯ್ಯ ಸಮುದಾಯ ಭವನ ಉದ್ಘಾಟನಾ ಕಾರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
Related Articles
Advertisement
ಕೌಶಲಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ ಮಾತನಾಡಿ ಸ್ವಾರ್ಥಕ್ಕಾಗಿ ಯಾವುದೇ ಸಮುದಾಯ ಬಳಕೆಯಾಗಬಾರದು ಪ್ರತಿಯೊಂದು ಸಮುದಾಯವೂ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಅತ್ಯಾವಶ್ಯಕವಾಗಿದ್ದು ಇದನ್ನು ಕುಂಚಿಟಿಗ ಮಠ ಮಾಡುತ್ತಾ ತ್ರಿವಿಧ ದಾಸೋಹ ಕೇಂದ್ರವಾಗಿ ಪ್ರಖ್ಯಾತಿಯನ್ನು ಗಳಿಸುತ್ತಿದ್ದು ಮಠಕ್ಕೆ ಎಲ್ಲ ಸಮುದಾಯ ಭಕ್ತರ ಕೊಡುಗೆ ಅಪಾರವಿದ್ದು ಇದು ಶ್ರೀಗಳ ಸಮಾಜಿಕ ಕಳಕಳಿಗೆ ಸಾಕ್ಷಿ ಎಂದರು.
ಕಾರ‍್ಯಕ್ರಮದಲ್ಲಿ ಕಾರದ ಮಠದ ವೀರಭಸವ ಮಹಾಸ್ವಾಮೀಜಿ, ಕುಣಿಗಲ್ ಹರೇಶಂಕರ ಮಠದ ಸಿದ್ದರಾಮ ಚೈತನ್ಯ, ತವಡಿಹಳ್ಳಿ ಗೋಸಲ ಚೆನ್ನಬಸವೇಶ್ವರ ಗದ್ದುಗೆ ಮಠದ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ವಿಭವ ವಿದ್ಯಾಶಂಕರ ದೇಶೀಕೇಂದ್ರಸ್ವಾಮೀಜಿ, ಗುಬ್ಬಿ ಬಸವ ಬೃಂಗಿ ಸ್ವಾಮೀಜಿ, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್ ಅನಿಲ್ ಕುಮಾರ್,ಮಡಗಶಿರಾ ತಾಲೂಕಿನ ಕುಂಚಿಟಿಗ ಸಂಘದ ತಾಲೂಕು ಅಧ್ಯಕ್ಷ ಅನಂತರಾಜು,ಕೆಪಿಸಿಸಿ ಸದಸ್ಯ ಎ.ಡಿ ಬಲರಾಮಯ್ಯ, ಜಿ.ಪಂ ಮಾಜಿ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ಜಿ.ಎಂ ಕಾಮರಾಜು, ಎಂ.ಎA ಸಿದ್ದಮಲ್ಲಪ್ಪ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಮ್ಮ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್,ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ, ನಿವೃತ್ತ ಡಿವೈಎಸ್‌ಪಿ ರಾಮಕೃಷ್ಣ,ಸೇರಿದಂತೆ ಇತರರು ಇದ್ದರು.
ನೆರೆಯ ಆಂದ್ರಪ್ರದೇಶ, ಬೆಂಗಳೂರು ಸೇರಿಂತೆ ಜಿಲ್ಲೆಯ ಶಿರಾ, ಮಧುಗಿರಿ, ಕೊರಟಗೆರೆ,ಪಾವಗಡ ಸೇರಿದಂತೆ ಬಳ್ಳಾರಿ, ಚಿತ್ರದುರ್ಗ, ಮೈಸೂರು, ಶಿವಮೊಗ್ಗೆ, ಹಾವೇರಿ, ಬಿಜಾಪುರ ಜಿಲ್ಲೆಗಳಿಂದ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಲಕ್ಷ್ಮೀನಸಿಂಹಸ್ವಾಮಿ ಸಮೇತ ಪರಿವಾರ ದೇವತೆಗಳಿಗೆ ಕಳಶಾರಾಧನೆ, ಮಹಾಗಣಪತಿ ಹೋಮ, ಪರಿವಾರ ಹೋಮ, ನೇತ್ರೋತ್ಮಿಲನ ಪ್ರಾಣ ಪ್ರತಿಷ್ಠಾ ತತ್ವನ್ಯಾಸಾದಿ ಹೋಮ, ಲಕ್ಷ್ಮೀನರಸಿಂಹಹೋಮ, ಶ್ರೀ ಆಂಜನೇಯ ಹೋಮ, ಆದಿತ್ಯಾದಿ ನವಗ್ರಹ ಹೋಮ, ಪರಿಹವಾರ ಹೋಮ, ಪ್ರಾಯಃಶ್ಚಿತ ಹೋಮ, ಮಹಾಪೂರ್ಣಾಹುತಿ ಹೋಮ, ಮಂಗಳಾರತಿ, ಗೋದರ್ಶನ ನಡೆದವು.
ಸಮುದಾಯ ಭವನದಲ್ಲಿ ಉದ್ಘಾಟನೆಯ ಮೊದಲನೆಯ ಧಾರ್ಮಿಕ ಕಾರ‍್ಯಕ್ರಮವಾಗಿ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಕರ‍್ಯಕ್ರಮ ಮೊದಲ ಮದವೆಗೆ ಸಾಕ್ಷಿಯಾಯಿತು. ಭಕ್ತರಿಗೆ ವಿಶೇಷ ರೀತಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.