Advertisement

ಮಹಾರಾಷ್ಟ್ರದ ಪತ್ರಾ ಚಾಲ್ ಹಗರಣ: ಗೋವಾದಲ್ಲಿ 31.50 ಕೋಟಿ ಮೌಲ್ಯದ ಆಸ್ತಿ ವಶ

05:33 PM Apr 04, 2023 | Team Udayavani |

ಪಣಜಿ:  ಮಹಾರಾಷ್ಟ್ರದ ಪತ್ರಾ ಚಾಲ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ರಿಕವರಿ ಡೈರೆಕ್ಟರೇಟ್ (ಇಡಿಡಿ) ಸೋಮವಾರ ಗೋವಾದಲ್ಲಿ 31.50 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈ.ಲಿ. ಕಂಪನಿಯು ರಾಕೇಶ್ ವಾಧ್ವಾನ್ ಮತ್ತು ಸಾರಂಗಕುಮಾರ್ ವಾಧ್ವಾನ್ ಅವರ ಒಡೆತನದಲ್ಲಿದೆ.

Advertisement

ಶಿವಸೇನಾ ಠಾಕ್ರೆ ಬಣದ ನಾಯಕ ಸಂಸದ ಸಂಜಯ್ ರಾವತ್ ಅವರು ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿದ್ದಾರೆ. ಮುಂಬೈನ ಗೋರೆಗಾಂವ್‍ನಲ್ಲಿನ ಪತ್ರಾಚಲ್ ಯೋಜನೆಯ ಪುನರಾಭಿವೃದ್ಧಿಗೆ ವಾಧವಾನ ಕಂಪನಿಯು ಕಾರಣವಾಗಿದೆ. ಇಲ್ಲಿ ಒಟ್ಟು 672 ಬಾಡಿಗೆದಾರರಿದ್ದರು. ಒಪ್ಪಂದದ ಪ್ರಕಾರ, 672 ಯುನಿಟ್‍ಗಳನ್ನು ಬಾಡಿಗೆದಾರರಿಗೆ, ಕೆಲವು ಘಟಕಗಳನ್ನು ಮ್ಹಾಡಾ ಮತ್ತು ಉಳಿದ ಘಟಕಗಳಿಗೆ ಮಾರಾಟ ಮಾಡಬೇಕಾಗಿತ್ತು.

ಆದರೆ ಕಂಪನಿಯ ನಿರ್ದೇಶಕರು ಒಂಬತ್ತು ಡೆವಲಪರ್‌ಗಳಿಗೆ ಎಫ್‍ಎಸ್‍ಐ ಮಾರಾಟ ಮಾಡಿ 900 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಬಾಡಿಗೆದಾರರಿಗೂ ವಸತಿ ನೀಡಿಲ್ಲ. ನಿರ್ದೇಶಕರು ಅಕ್ರಮ ಚಟುವಟಿಕೆಗಳಿಂದ 1,000 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದೂ ಇಡಿ ಆರೋಪಿಸಿದೆ. 2011 ಮತ್ತು 2016 ರ ನಡುವೆ, ಇಂಡಿಯಾ ಬುಲ್ಸ್ ಫೈನಾನ್ಸ್‍ನಿಂದ  ಖಾತೆಯಿಂದ ರೂ 28.5 ಕೋಟಿ ಹಾಗೂ ರಾಕೇಶ್ ವಾಧವಾನ ಅವರ ಖಾತೆಯಲ್ಲಿ 38.5 ಕೋಟಿ ರೂ ಸಾಲದ ಕಂತುಗಳ ಪೂರ್ವಪಾವತಿಗಾಗಿ ಬಳಕೆ ಮಾಡಲಾಗಿದೆ.

ಸಾರಂಗ್ ವಾಧವಾನ ಅವರು ಉತ್ತರ ಗೋವಾದಲ್ಲಿ ತಮ್ಮ ವೈಯಕ್ತಿಕ ಖಾತೆಯಿಂದ 31.50 ಕೋಟಿ ರೂಪಾಯಿ ಮೌಲ್ಯದ 1,250 ಚದರ ಮೀಟರ್ ಮತ್ತು 15,300 ಚದರ ಮೀಟರ್ ಪ್ಲಾಟ್‍ಗಳನ್ನು ಖರೀದಿಸಿದ್ದಾರೆ ಎಂದು ಇಡಿಡಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next