Advertisement

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

06:29 PM Sep 30, 2024 | Team Udayavani |

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸೋಮವಾರ ದೇಸಿ (ಸ್ಥಳೀಯ) ಹಸುಗಳನ್ನು ‘ರಾಜ್ಯಮಾತಾ ಗೋಮಾತೆ’ ಎಂದು ಘೋಷಿಸಿದೆ.

Advertisement

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿ, ಭಾರತೀಯ ಸಂಸ್ಕೃತಿ, ಕೃಷಿಯಲ್ಲಿ ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆ ಆಧರಿಸಿ ಅವುಗಳನ್ನು ‘ರಾಜ್ಯಮಾತಾ ಗೋಮಾತೆ’ ಎಂದು ಘೋಷಿಸಲಾಗಿದೆ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಆರೋಗ್ಯ ಪೋಷಣೆಯಲ್ಲಿ ದೇಸಿ ಹಸು ಪ್ರಮುಖ ಪಾತ್ರ:
ಮಾನವನ  ಆರೋಗ್ಯ  ಪೋಷಣೆಯಲ್ಲಿ ದೇಸಿ ಹಸುವಿನ ಹಾಲಿನ ಪ್ರಾಮುಖ್ಯತೆ ಪಡೆದಿದೆ. ದೇಸಿ ಹಸುವಿನ ಸಗಣಿ, ಗಂಜಲ (ಮೂತ್ರ) ಆಯುರ್ವೇದ ಮತ್ತು ಪಂಚಗವ್ಯ ಚಿಕಿತ್ಸೆ, ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರವಾಗಿ ಬಳಸುತ್ತಿದ್ದು ಹಾಗೆಯೇ ಇತರ ಅಂಶಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಸರ್ಕಾರದ ನಿರ್ಣಯ ತಿಳಿಸಿದೆ.

ಹೆಚ್ಚುವರಿ ಗೋಶಾಲೆ: ಫಡ್ನವೀಸ್ 
“ದೇಸಿ ಹಸುಗಳು ರೈತರಿಗೆ ವರದಾನವಾಗಿದೆ. ಆದ್ದರಿಂದ ಮಹಾರಾಷ್ಟ್ರ ಸರ್ಕಾರವು ಅವುಗಳಿಗೆ ‘ರಾಜ್ಯ ಮಾತಾ’ ಸ್ಥಾನಮಾನ ನೀಡಲು ನಿರ್ಧರಿಸಿದೆ. ದೇಸಿ ಹಸುಗಳನ್ನು ಸಾಕಾಣಿಕೆಗೆ ನೆರವಾಗುವ ದೃಷ್ಟಿಯಿಂದ ಹೆಚ್ಚುವರಿ ಗೋಶಾಲೆಗಳ ನೀಡಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ಪ್ರಕಾರ, ರಾಜ್ಯ ಸಚಿವ ಸಂಪುಟವು ದೇಸಿ ಹಸುಗಳನ್ನು ಸಾಕಲು ದಿನಕ್ಕೆ 50 ರೂಪಾಯಿ ಸಬ್ಸಿಡಿ ಯೋಜನೆಗೆ ಅನುಮೋದನೆ ನೀಡಿದೆ. ಕಡಿಮೆ ಆದಾಯದಿಂದ ಗೋಶಾಲೆಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಅವುಗಳನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಮತ್ತು ಈ ಯೋಜನೆಯನ್ನು ಮಹಾರಾಷ್ಟ್ರ ಗೋಸೇವಾ ಆಯೋಗವು ಆನ್‌ಲೈನ್‌ ಮೂಲಕ ಕಾರ್ಯಗತಗೊಳಿಸಲಿದೆ”.

Advertisement

ಹಿಂದೂ ಧರ್ಮದ ಪ್ರಕಾರ ಹಸುಗಳು ಧಾರ್ಮಿಕ, ಸಾಂಸ್ಕೃತಿಕ ಪ್ರಾಮುಖ್ಯತೆ ಹೊಂದಿದೆ. ಅದರಲ್ಲೂ ದೇಸಿ ಗೋವಿನ ಹಾಲು ಶ್ರೇಷ್ಠ ಸ್ಥಾನದಲ್ಲಿದೆ. ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗಿದ್ದು ಏಕೆಂದರೆ ತಾಯಿಯ ಬಳಿಕ ಹಾಲು ನೀಡಿ ಪೋಷಿಸುವುದು ಗೋವು ಅದು ಮಾತ್ರವಲ್ಲದೇ ಆರೋಗ್ಯಕ್ಕೆ ಪೂರಕವಾದ ಹಸುವಿನ ಇತರ ಉಪ ಉತ್ಪನ್ನಗಳ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next