ಮುಂಬೈ: ಎನ್‌ಸಿಸಿ ಮುಖಂಡ, ಸಚಿವ ನವಾಬ್ ಮಲಿಕ್ ಅವರಿಗೆ ಮುಂಬೈನ ಸ್ಥಳೀಯ ಕೋರ್ಟ್ ಸೋಮವಾರ ಜಾಮೀನು ನೀಡಿದೆ.
ಮಲಿಕ್ ಅವರಿಗೆ ವೈಯಕ್ತಿಕ ಬಾಂಡ್ 15 ಸಾವಿರ ರೂ. ನೀಡುವಂತೆಯೂ ನ್ಯಾಯಾಲಯ ಆದೇಶ ನೀಡಿದೆ.
ಮುಂಬೈ ಬಿಜೆಪಿಯ ಯುವ ಮೋರ್ಚಾ ಘಟಕದ ಅಧ್ಯಕ್ಷ ಮೋಹಿತ್ ಕಾಂಬೋಜ್ ಭಾರತೀಯ ಅವರು ಸಚಿವ ಮಲಿಕ್ ವಿರುದ್ಧ ಮೊಕದ್ದಮೆ ಹೂಡಿದ್ದರು.
ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಇದ್ದ ವಿಲಾಸಿ ನೌಕೆಗೆ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮತ್ತು ಅವರ ಭಾವ ಇದ್ದರು ಎಂದು ಸಚಿವ ಮಲಿಕ್ ಆರೋಪಿಸಿದ್ದರು. ಈ ಮಾತುಗಳ ವಿರುದ್ಧ ಮೋಹಿತ್ ಕಾಂಬೋಜ್ ಭಾರತೀಯ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸಚಿವರಿಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ:ಕುಣಿಗಲ್: ನೀರಿನಲ್ಲಿ 4 ಮಂದಿ ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ
ವಾಂಖೆಡೆ ಅರ್ಜಿ ವಜಾ:
ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದೇ ಆಗಿರುವ ಮತ್ತೂಂದು ಪ್ರಕರಣದಲ್ಲಿ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಸಚಿವ ಮಲಿಕ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಸಚಿವ ಮಲಿಕ್ ತಮ್ಮ ಹಾಗೂ ಕುಟುಂಬದ ವಿರುದ್ಧ ಟ್ವೀಟ್ ಮಾಡದಂತೆ ತಡೆಯೊಡ್ಡಬೇಕು ಎಂದು ಅರಿಕೆ ಮಾಡಿದ್ದರು.