Advertisement

Contracter Case: ನಿಷ್ಪಕ್ಷ ತನಿಖೆಗೆ ಸಚಿವರು, ಸಿಎಂ ರಾಜೀನಾಮೆ ನೀಡಲಿ: ಗೋವಿಂದ ಕಾರಜೋಳ

01:48 AM Dec 30, 2024 | Team Udayavani |

ಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಆರೋಪ ಕೇಳಿಬಂದಿದೆ. ಅವರಿನ್ನೂ ಯುವಕರಿದ್ದಾರೆ. ರಾಜಕೀಯ ಮಾಡಲು ಬೇಕಾದಷ್ಟು ಕಾಲಾವಧಿ ಇದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಅವರು ರಾಜೀನಾಮೆ ಕೊಡಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಜೀನಾಮೆ ಕೊಟ್ಟರೆ ಸೂಕ್ತ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

Advertisement

ರವಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಸಂತೋಷ್‌ ಪಾಟೀಲ್‌ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಾಗ ಕಾಂಗ್ರೆಸಿಗರು ವಿನಾಕಾರಣ ಈಶ್ವರಪ್ಪ ಅವರ ಮೇಲೆ ಆರೋಪ ಹೊರಿಸಿ ರಾಜೀನಾಮೆ ಕೇಳಿದ್ದರು. ಪಾರದರ್ಶಕವಾಗಿ ತನಿಖೆ ಆಗಲಿ ಎನ್ನುವ ಕಾರಣಕ್ಕೆ ನಮ್ಮ ಪಕ್ಷವು ಈಶ್ವರಪ್ಪ ಅವರ ರಾಜೀನಾಮೆ ಪಡೆದಿತ್ತು. ಇದನ್ನು ಕಾಂಗ್ರೆಸಿಗರು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ನೆನಪು ಮಾಡಿಕೊಡುತ್ತೇನೆ ಎಂದರು.

ಬೀದರ್‌ನ ಸಚಿನ್‌ ಮನೆಗೆ ನಮ್ಮ ಪಕ್ಷದ ನಾಯಕರು ಭೇಟಿ ಕೊಟ್ಟಿದ್ದಾರೆ. ಪ್ರಕರಣ ಸಂಬಂಧ ಸತ್ಯಶೋಧನ ತಂಡ ಕೂಡ ಭೇಟಿ ಕೊಡಲಿದೆ. ಅದರ ವರದಿಯೂ ಬರಲಿದೆ. ಅದೇನೇ ಆಗಿದ್ದರೂ ನಿಷ್ಪಕ್ಷಪಾತವಾಗಿ ತನಿಖೆಗೆ ಅವಕಾಶ ನೀಡಲು ಸಚಿವ ಸ್ಥಾನಕ್ಕೆ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಕೊಡುವುದು ಒಳ್ಳೆಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next