Advertisement

ಮಹಾರಾಷ್ಟ್ರ ಮತ್ತೆ ಸ್ತಬ್ಧ : ಮೇ 30 ರವರೆಗೆ ಲಾಕ್ ಡೌನ್ ವಿಸ್ತರಣೆ

09:45 AM May 13, 2021 | Team Udayavani |

ಮುಂಬೈ : ಪ್ರತಿ ನಿತ್ಯ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಈಗಿರುವ ಲಾಕ್ ಡೌನ್ ಅನ್ನು ಮೇ 30ರವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಸಂಪುಟ ಸಭೆ ಬಳಿಕ, ಮೇ 16ರಿಂದ ಮೇ 30ವೆರಗೂ ಲಾಕ್​ಡೌನ್ ವಿಸ್ತರಣೆ ಮಾಡಿ ಉದ್ಧವ್ ಠಾಕ್ರೆ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸತತ ಎರಡು ವಾರಗಳ ಕಾಲ ಮತ್ತೆ ಮಹಾರಾಷ್ಟ್ರ ಸಂಪೂರ್ಣ ಸ್ತಬ್ಧವಾಗಲಿದೆ.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ  46,781 ಹೊಸ ಕೋವಿಡ್ ವೈರಸ್ ಪ್ರಕರಣಗಳು ಮತ್ತು 816 ಸಾವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 58,805 ರೋಗಿಗಳನ್ನು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next