ಮುಂಬಯಿ : ಮಹಾರಾಷ್ಟ್ರದಲ್ಲಿನ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ 1,311 ಸ್ಥಾನಗಳನ್ನು ಗೆದ್ದಿದ್ದು ಇದು ರಾಜ್ಯದಲ್ಲಿನ ಆಳುವ ಬಿಜೆಪಿಗೆ ದೊರಕಿರುವ ಭಾರೀ ದೊಡ್ಡ ವಿಜಯವೆಂದು ತಿಳಿಯಲಾಗಿದೆ.
ಗ್ರಾಮಾಂತರ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಅತ್ಯಂತ ಪ್ರಬಲ ಪಕ್ಷವಾಗಿ ಈ ಚುನಾವಣೆಗಳಲ್ಲಿ ಮೂಡಿಬಂದಿದೆ. ಎದುರಾಳಿಗಳಾದ ಶಿವಸೇನೆಗೆ 295 ಸೀಟು, ಕಾಂಗ್ರೆಸ್‌ಗೆ 312, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 297 ಮತ್ತು ಇತರರಿಗೆ 453 ಸೀಟುಗಳು ದೊರಕಿವೆ.
ಭಂಡಾರಾದಲ್ಲಿ ಬಿಜೆಪಿಗೆ 191 ಸೀಟು ಮತ್ತು ಗೋಂಡಿಯಾದಲ್ಲಿ 147 ಸೀಟುಗಳು ಸಿಕ್ಕಿವೆಯಾದರೂ ಸಿಂಧುದುರ್ಗದಲ್ಲಿ ಪಕ್ಷಕ್ಕೆ 71 ಸೀಟುಗಳು ಪ್ರಾಪ್ತವಾಗಿವೆ.
ಸಾಂಗ್ಲಿಯಲ್ಲಿ 137 ಮತ್ತು ಅಮರಾವತಿಯಲ್ಲಿ 150 ಸ್ಥಾನಗಳು ಬಿಜೆಪಿಗೆ ಸಿಕ್ಕಿವೆ. ನಾಗ್ಪುರ ಮತ್ತು ಕೊಲ್ಲಾಪುರದಲ್ಲಿ ಅನುಕ್ರಮವಾಗಿ 126 ಮತ್ತು 111 ಸೀಟುಗಳು ಕೇಸರಿ ಪಕ್ಷದ ಪಾಲಾಗಿವೆ.
ಸಾತಾರಾದ ಮಯಾನಿ ಗ್ರಾಮದ ಸರಪಂಚರಾಗಿ ಸಚಿನ್ ಮೋಹನ್ ರಾವ್ ಗುಡಗೆ ಆಯ್ಕೆಯಾಗಿದ್ದಾರೆ. ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಗ್ರಾಮದಲ್ಲಿ ಸರಪಂಚ ಸ್ಥಾನ ಬಿಜೆಪಿಗೆ ಸಿಕ್ಕಿರುವುದು ಗಮನಾರ್ಹವಾಗಿದೆ.
ಎರಡನೇ ಹಂತದಲ್ಲಿ 16 ಜಿಲ್ಲೆಗಳಲ್ಲಿ ಚದುರಿರುವ 3,692 ಗ್ರಾಮ ಪಂಚಾಯತ್‌ಗಳು ಚುನಾವಣೆಗೆ ಒಳಪಟ್ಟಿದ್ದವು.