Advertisement

Maharashtra ಶಾಲಾ ವ್ಯಾಪ್ತಿಯಲ್ಲಿ ಹೈ ಕೆಫೀನ್‌ ಪಾನೀಯ ನಿಷೇಧ

12:29 AM Jul 13, 2024 | Team Udayavani |

ಮುಂಬಯಿ: ಅಧಿಕ ಕೆಫೀನ್‌ ಅಂಶವಿರುವ ಪಾನೀಯಗಳನ್ನು ಮಹಾರಾಷ್ಟ್ರದ ಶಾಲೆಗಳ 500 ಮೀಟರ್‌ ವ್ಯಾಪ್ತಿಯಲ್ಲಿ ಮಾರಾಟ ಮಾಡದಂತೆ ನಿಷೇಧ ವಿಧಿಸಲು ಶೀಘ್ರವೇ ಆದೇಶ ಹೊರಡಿಸುವು ದಾಗಿ ರಾಜ್ಯ ಆಹಾರ ಸಚಿವ ಧರ್ಮರಾವ್‌ ಬಾಬಾ ಆತ್ರಂ ಶುಕ್ರವಾರ ಹೇಳಿದ್ದಾರೆ.

Advertisement

ವಿಧಾನಮಂಡಲದಲ್ಲಿ ಸ್ವತಂತ್ರ ಶಾಸಕ ಸತ್ಯಜಿತ್‌ ತಾಂಬೆ ಅವರು ಶಾಲಾ ವ್ಯಾಪ್ತಿಯ ಸುರಕ್ಷೆಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ ಸಚಿವ, “ಅಸ್ತಿತ್ವದಲ್ಲಿ ರುವ ನಿಯಮಗಳ ಪ್ರಕಾರ 1 ಲೀಟರ್‌ ಕಾರ್ಬೋ ನೇಟೆಡ್‌ ಪಾನೀಯಕ್ಕೆ 145ರಿಂದ 300 ಎಂಎಲ್‌ ಕೆಫೀನ್‌ ಸೇರಿಸಲು ಹಾಗೂ ಅಂಥ ಪಾನೀಯಗಳನ್ನು ಮಾರಾಟ ಮಾಡಲು ಅವಕಾಶವಿದೆ. ಇದೀಗ ನಿಯಮ ಪರಿಶೀಲಿಸಿ, ಹೈ ಕೆಫೀನ್‌ ಅಂಶವಿರುವ ಪಾನೀಯಗಳನ್ನು ಪಟ್ಟಿಮಾಡಲು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next