Advertisement

ಮಹಾರಾಷ್ಟ್ರದ 48 ಸ್ಥಾನಕ್ಕೆ ತೀವ್ರ ಜಟಾಪಟಿ; ಬಿಜೆಪಿಗೆ ಮೈತ್ರಿ ಅಗತ್ಯ

03:17 PM Dec 23, 2018 | Team Udayavani |

ಮುಂಬಯಿ: ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳ ಅನಂತರ, 2019ರ ಲೋಕ ಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪುನಶ್ಚೇತನಗೊಂಡಿರುವ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ಬಿಜೆಪಿಯು ತನ್ನ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ತಿಂಗಳುಗಳು ತೀವ್ರ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಲಿವೆ. 

Advertisement

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಯುದ್ಧಕ್ಕೆ ಸಾಕ್ಷಿಯಾಗಲಿರುವ ದೇಶದ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ ಒಂದಾಗಿರಲಿದೆ. ಉತ್ತರಪ್ರದೇಶದ (80) ಅನಂತರ ಮಹಾರಾಷ್ಟ್ರ ಅತ್ಯಧಿಕ ಸಂಸತ್‌ ಸ್ಥಾನಗಳನ್ನು (48) ಹೊಂದಿರುವ ಎರಡನೇ ರಾಜ್ಯವಾಗಿದೆ. 2014ರಲ್ಲಿ ಉತ್ತರಪ್ರದೇಶದ (70)  ಬಳಿಕ ಮಹಾರಾಷ್ಟ್ರ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು (42) ನೀಡಿತ್ತು.  ಸಾಮಾನ್ಯ ಊಹಾಪೋಹವೆಂದರೆ, ವಿಪಕ್ಷಗಳ ಏಕತೆ ಸೇರಿದಂತೆ ವಿಭಿನ್ನ ಅಂಶಗಳಿಂದ ಬಿಜೆಪಿಯ ಹಿಂದಿ ಭಾಷಿಕ ಮತದಾರರ ವಲಯ ದಿಂದ ಸ್ಥಾನಗಳು ಕಡಿಮೆಯಾಗುವ ನಿರೀಕ್ಷೆಯಿದೆ.  

ಹಿಂದಿ ವಲಯದಲ್ಲಿ ನಷ್ಟವನ್ನು ನಿರೀಕ್ಷಿಸುತ್ತಾ ಬಿಜೆಪಿ ಬೇರೆಡೆ ಇರುವ ಸ್ಥಾನಗಳ ಪೈಕಿ ಗರಿಷ್ಠ ಸ್ಥಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಮತ್ತೂಂದೆಡೆ, ಕಾಂಗ್ರೆಸ್‌ ತನ್ನ ಸಂಖ್ಯಾಬಲವನ್ನು ಸುಧಾರಿಸಲು ಮತ್ತು ಬಿಜೆಪಿಯ ಸಂಖ್ಯಾಬಲವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ, ರಾಜ್ಯದ 48 ಸ್ಥಾನಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 42 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಕಾಂಗ್ರೆಸ್‌-ಎನ್‌ಸಿಪಿ ಕೇವಲ ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿಯು ಆಗ ಶಿವಸೇನೆ, ರಾಮದಾಸ್‌  ಅಠವಳೆ ನೇತೃತ್ವದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್ಪಿಐ), ರೈತ ನಾಯಕ ರಾಜು ಶೆಟ್ಟಿ ಅವರ ಸ್ವಾಭಿಮಾನಿ ಶೇತ್ಕರಿ  ಪಕ್ಷ ಮತ್ತು ಮಹಾದೇವ್‌ ಜನ್ಕಾರ್‌ ನೇತೃತ್ವದ ರಾಷ್ಟ್ರೀಯ ಸಮಾಜವಾದಿ ಪಕ್ಷದ ಮೈತ್ರಿ ಹೊಂದಿತ್ತು.  ಬಿಜೆಪಿ 23 ಸ್ಥಾನಗಳನ್ನು ಗೆದ್ದುಕೊಂಡಿತು, 18 ಶಿವಸೇನೆಗೆ ಹೋಯಿತು ಮತ್ತು ಶೆಟ್ಟಿ ನೇತೃತ್ವದ ಪಕ್ಷವು ಒಂದು ಸ್ಥಾನವನ್ನು ಪಡೆಯಿತು.

ಕನಿಷ್ಠ 35 ಸ್ಥಾನದ ಗುರಿ
ಮುಂಬರುವ ಚುನಾವಣೆಯಲ್ಲಿ ಇದೇ ಯಶಸ್ಸನ್ನು ಪುನರಾವರ್ತಿಸುವುದು ಕಷ್ಟಕರವೆಂದು ರಾಜ್ಯದ ಬಿಜೆಪಿ ನಾಯಕರು ತಿಳಿದಿದ್ದು, ಅದಕ್ಕಾಗಿ ಅವರು 2019ರಲ್ಲಿ ಕನಿಷ್ಠ 35 ಸ್ಥಾನಗಳನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿ¨ªಾರೆ.
2004ರಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 25 ಸ್ಥಾನಗಳನ್ನು ಪಡೆದು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2009ರಲ್ಲಿ ಕಾಂಗ್ರೆಸ್‌-ಎನ್‌ಸಿಪಿ 25 ಸ್ಥಾನಗಳನ್ನು ಪಡೆದು, ಬಿಜೆಪಿ-ಶಿವಸೇನೆ 20 ಸ್ಥಾನಗಳನ್ನು ಗಳಿಸಿತ್ತು. 1999ರಿಂದ ಕಾಂಗ್ರೆಸ್‌-ಎನ್‌ಸಿಪಿ ತಂಡವು ಸತತವಾಗಿ 20 ರಿಂದ 25 ಸ್ಥಾನಗಳನ್ನು ಗೆದ್ದುಕೊಳ್ಳುತ್ತ ಬಂದಿತ್ತು.

Advertisement

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದಿಂದ ಉತ್ಸಾಹ ದಲ್ಲಿರುವ ಶಿವಸೇನೆಯು ಮುಂಬರುವ ಲೋಕ ಸಭಾ ಮತ್ತು ರಾಜ್ಯ ವಿಧಾನಸಭಾ ಚುನಾ ವಣೆಗೆ ಮೈತ್ರಿಮಾಡಿಕೊಳ್ಳುವ ಸಮಯದಲ್ಲಿ ಇದನ್ನು ಆಧಾರವಾಗಿಟ್ಟುಕೊಂಡು ಬಿಜೆಪಿಯಿಂದ ಶೇ.50ರಷ್ಟು ಸ್ಥಾನಗಳನ್ನು ಕೇಳಬಹುದು ಎಂದೂ ಹೇಳಲಾಗುತ್ತಿದೆ.

ಯುದ್ಧಭೂಮಿ?
ಬಿಜೆಪಿಯು ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ವೃದ್ಧಿ, ಕೃಷಿ ಸಾಲ ಮನ್ನಾ, ಮರಾಠ ಮೀಸಲಾತಿಯ ಲಾಭ ಪಡೆಯಲು ಆಶಿಸಿದರೆ, ವಿರೋಧ ಪಕ್ಷವು ಗ್ರಾಮೀಣ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಚುನಾವಣೆ ಹತ್ತಿರವಾಗುತ್ತಿದಂತೆ ಎರಡೂ ಬಣಗಳು ಪರಸ್ಪರರ ಮೇಲೆ ದಾಳಿ ನಡೆಸಲಿವೆ. ಇದರೊಂದಿಗೆ 2019ರ ಸಂಸತ್ತಿನ ಚುನಾವಣೆಯಲ್ಲಿ ಮಹಾರಾಷ್ಟ್ರವು ಯುದ್ಧಭೂಮಿಯಾಗಿ ಬದಲಾಗಲಿದೆ.

ಮೈತ್ರಿ ಅಗತ್ಯ
ಪ್ರಸಕ್ತ ಸನ್ನಿವೇಶದಲ್ಲಿ, ಬಿಜೆಪಿಯು ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಯಸಿದರೆ, ಅದು ಶಿವಸೇನೆಯೊಂದಿಗೆ ಮೈತ್ರಿಮಾಡಿಕೊಳ್ಳುವುದು ಅಗತ್ಯವಾಗಿದೆ. ಮುಂಬಯಿ ಮತ್ತು ಕೊಂಕಣ ಒಟ್ಟಾಗಿ 13 ಸ್ಥಾನಗಳನ್ನು ಹೊಂದಿದ್ದು ಅವುಗಳಲ್ಲಿ ಬಿಜೆಪಿ 5 ಮತ್ತು ಶಿವಸೇನೆ 8 ಸ್ಥಾನಗಳನ್ನು ಹೊಂದಿದೆ. ಒಂದೊಮ್ಮೆ ಶಿವಸೇನೆ ಮತ್ತು ಬಿಜೆಪಿಯು 2014ರಲ್ಲಿ ಗೆದ್ದುಕೊಂಡ ಸ್ಥಾನಗಳನ್ನು ಮತ್ತೆ  ಗೆಲ್ಲಲು ಬಯಸಿದರೆ ಮೈತ್ರಿ ಅನಿವಾರ್ಯವಾಗಲಿದೆ. ಮರಾಠವಾಡ ಮತ್ತು ಉ.ಮಹಾರಾಷ್ಟ್ರದಲ್ಲಿ ಮತಗಳ ವಿಭಜನೆ ತಡೆಗಟ್ಟಲು ಕೇಸರಿ ಪಕ್ಷಗಳು ಪರಸ್ಪರ ಒಗ್ಗೂಡುವ ಆವಶ್ಯಕತೆ ಇದೆ. ಇತರ ಪ್ರದೇಶಗಳಲ್ಲಿನ ಕೆಲವು ಕ್ಷೇತ್ರಗಳಿಗೂ ಇದು ಅನ್ವಯವಾಗಲಿದೆ. ಇಂಥ ದರಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿಯು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.   ಕಾಂಗ್ರೆಸ್‌ ಮತ್ತು ಎನ್‌ಸಿಪಿ ತಮ್ಮ ಮೆತ್ರಿಕೂಟ ಈಗಾಗಲೇ ಘೋಷಿಸಿವೆ. ಇಂಥದಲ್ಲಿ ಬಿಜೆಪಿ,ಶಿವಸೇನೆಯು ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವುದು ಕಷ್ಟವೆಂದು ಎರಡೂ ಪಕ್ಷಗಳಿಗೆ ಅರಿವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next