Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಲ್ಬರ್ಗ 16.4 ಓವರ್‌ಗಳಲ್ಲಿ 116ಕ್ಕೆ ಕುಸಿದರೆ, ಬೆಂಗಳೂರು ಕೇವಲ 11.2 ಓವರ್‌ಗಳಲ್ಲಿ ಒಂದೇ ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿತು. ಚೇಸಿಂಗ್ ವೇಳೆ ಎಲ್.ಆರ್. ಚೇತನ್ 53, ನಾಯಕ ಮಾಯಾಂಕ್ ಅಗರ್ವಾಲ್ ಅಜೇಯ 47 ರನ್ ಹೊಡೆದರು. ಆದಿತ್ಯ ಗೋಯಲ್ (43ಕ್ಕೆ 3), ನವೀನ್ ಎಂ.ಜಿ. (8ಕ್ಕೆ 2), ಮೊಹ್ಸಿನ್ ಖಾನ್ (8ಕ್ಕೆ 2), ಲವಿಶ್ ಕೌಶಲ್ (22ಕ್ಕೆ 2) ಮಿಂಚಿನ ದಾಳಿ ನಡೆಸಿ ಗುಲ್ಬರ್ಗಕ್ಕೆ ಕಂಟಕವಾಗಿ ಪರಿಣಮಿಸಿದರು. ಗುಲ್ಬರ್ಗ ಪರ 20 ರನ್ ಮಾಡಿದ ನಾಯಕ ದೇವದತ್ ಪಡಿಕ್ಕಲ್ ಅವರದೇ ಹೆಚ್ಚಿನ ಗಳಿಕೆ. ಪ್ರವೀಣ್ ದುಬೆ 19 ರನ್ ಮಾಡಿದರು.
ಮೈಸೂರು ವಾರಿಯರ್ ಮತ್ತು ಶಿವಮೊಗ್ಗ ಲಯನ್ಸ್ ನಡುವಿನ 2ನೇ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು 8 ವಿಕೆಟಿಗೆ 159 ರನ್ ಗಳಿಸಿದೆ. ಶುಕ್ರವಾರ ಅಪರಾಹ್ನ ಮಂಗಳೂರು ಡ್ರ್ಯಾಗನ್ಸ್-ಹುಬ್ಬಳ್ಳಿ ಟೈಗರ್ ಮುಖಾಮುಖೀ ಆಗಲಿವೆ.