Advertisement

Bengaluru Chinnaswamy stadium; ಟೆಸ್ಟ್‌ ಆತಿಥ್ಯಕ್ಕೆ 50 ವರ್ಷ; ಟೆಸ್ಟ್‌ ಸಂಖ್ಯೆ 25

10:44 PM Oct 15, 2024 | Team Udayavani |

ಬೆಂಗಳೂರು: ಭಾರತ- ನ್ಯೂಜಿಲ್ಯಾಂಡ್‌ ಟೆಸ್ಟ್‌ ಪಂದ್ಯದ ವೇಳೆ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಅವಳಿ ಸಂಭ್ರಮ ದಲ್ಲಿ ಮಿಂದೇಳಲಿದೆ. ಮೊದಲನೆಯದಾಗಿ ಇಲ್ಲಿನ ಟೆಸ್ಟ್‌ ಆತಿಥ್ಯಕ್ಕೆ 50 ವರ್ಷ ತುಂಬಲಿದೆ. ಹಾಗೆಯೇ ಇದು ಈ ಅಂಗಳದಲ್ಲಿ ನಡೆಯಲಿರುವ 25ನೇ ಟೆಸ್ಟ್‌ ಪಂದ್ಯವಾಗಿದೆ.

Advertisement

1974ರ ನವೆಂಬರ್‌ 22-27ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಇಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಾಗಿತ್ತು. ವಿಂಡೀಸ್‌ ಕ್ರಿಕೆಟಿನ ಮಹಾನ್‌ ಬ್ಯಾಟರ್‌ಗಳಾಗಿ ರೂಪುಗೊಂಡ ಗಾರ್ಡನ್‌ ಗ್ರೀನಿಜ್‌ ಮತ್ತು ವಿವಿಯನ್‌ ರಿಚರ್ಡ್ಸ್‌ ಇದೇ ಪಂದ್ಯದ ಮೂಲಕ ಟೆಸ್ಟ್‌ ಪದಾರ್ಪಣೆ ಮಾಡಿದ್ದು ಬೆಂಗಳೂರು ಪಾಲಿಗೊಂದು ಹೆಮ್ಮೆ. ಆದರೆ ಮನ್ಸೂರ್‌ ಅಲಿ ಖಾನ್‌ ಪಟೌಡಿ ನೇತೃತ್ವದ ಭಾರತದ ಪಾಲಿಗೆ ಇದೊಂದು ಕಹಿ ನೆನಪಿನ ಪಂದ್ಯವಾಗಿತ್ತು. ಕ್ಲೈವ್‌ ಲಾಯ್ಡ ಪಡೆಯ ವಿರುದ್ಧ 267 ರನ್ನುಗಳ ಭಾರೀ ಸೋಲು ಎದುರಾಗಿತ್ತು!

ಭಾರತದ 5ನೇ ಮೈದಾನ

ಚಿನ್ನಸ್ವಾಮಿ ಸ್ಟೇಡಿಯಂ 25 ಟೆಸ್ಟ್‌ ಪಂದ್ಯಗಳ ಆತಿಥ್ಯ ವಹಿಸುತ್ತಿರುವ ಭಾರತದ 5ನೇ ಮೈದಾನ. ದಾಖಲೆ ಕೋಲ್ಕತಾ ಈಡನ್‌ ಗಾರ್ಡನ್ಸ್‌ ಹೆಸರಲ್ಲಿದೆ. ಇಲ್ಲಿ ಆಡಲಾದ ಟೆಸ್ಟ್‌ ಪಂದ್ಯಗಳ ಸಂಖ್ಯೆ 42. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಮತ್ತು ಡೆಲ್ಲಿಯ ಫಿರೋಜ್‌ ಶಾ ಕೋಟ್ಲಾದಲ್ಲಿ (ಈಗ ಅರುಣ್‌ ಜೇಟಿÉ ಸ್ಟೇಡಿಯಂ) ತಲಾ 35, ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ 26 ಟೆಸ್ಟ್‌ಗಳನ್ನು ಆಡಲಾಗಿದೆ.

ಒಂದೇ ನಗರದಲ್ಲಿ ಅತೀ ಹೆಚ್ಚು ಟೆಸ್ಟ್‌ಗಳನ್ನಾಡಿಸಿದ ಭಾರತೀಯ ದಾಖಲೆ ಮುಂಬಯಿಗೆ ಸಲ್ಲುತ್ತದೆ. ವಾಂಖೇಡೆಯಲ್ಲಿ 26 ಹಾಗೂ ಬ್ರೆಬೋರ್ನ್ನಲ್ಲಿ 18, ಹೀಗೆ 44 ಟೆಸ್ಟ್‌ಗಳಿಗೆ ಮುಂಬಯಿ ಆತಿಥ್ಯ ವಹಿಸಿದೆ.

Advertisement

ಲಾರ್ಡ್ಸ್‌ ವಿಶ್ವದಾಖಲೆ

ವಿಶ್ವದಲ್ಲೇ ಅತ್ಯಧಿಕ ಟೆಸ್ಟ್‌ ಪಂದ್ಯಗಳ ಆತಿಥ್ಯ ವಹಿಸಿದ ದಾಖಲೆ ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದ ಹೆಸರಲ್ಲಿದೆ. ಇಲ್ಲಿ ಆಡಲಾದ ಟೆಸ್ಟ್‌ ಪಂದ್ಯಗಳ ಸಂಖ್ಯೆ 147. “ಟೆಸ್ಟ್‌ ಶತಕ’ ಬಾರಿಸಿದ ವಿಶ್ವದ ಉಳಿದ 3 ಕ್ರೀಡಾಂಗಣಗಳೆಂದರೆ ಮೆಲ್ಬರ್ನ್ (116), ಸಿಡ್ನಿ (112) ಮತ್ತು ಓವಲ್‌ (107).

Advertisement

Udayavani is now on Telegram. Click here to join our channel and stay updated with the latest news.

Next