ಬೆಂಗಳೂರು: ಬುಧವಾರ ನಡೆಯಲಿರುವ ಮತದಾನದಲ್ಲಿ ಮಹಾಲಕ್ಷ್ಮೀ ಲೇಔಟ್‌ನ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಮತ್ತೂಮ್ಮೆ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಿನ ಬಹುಮತದೊಂದಿಗೆ ಬೆಂಬಲ ನೀಡಿ ಎಂದು ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಕೋರಿದರು.
ಮಹಾಲಕ್ಷ್ಮೀಲೇಔಟ್ ವಿಧಾನ ಸಭಾ ಕ್ಷೇತ್ರದ ಕೃಷ್ಣಾನಂದ ನಗರ ಏಕ್ಸ್ಪೋರ್ಟಿಂಗ್ ಸಿಂಡಿಕೇಟ್ ಪ್ರೈವೇಟ್ ಗಾರ್ಮೆಂಟ್ಸ್‌ನಲ್ಲಿ ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್ ನಂತಹ ಮಹಾಮಾರಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರವು ಜನಸಾಮಾನ್ಯರಿಗೆ ಆಕ್ಸಿಜನ್ ಹಾಗೂ ಉಚಿತ ಲಸಿಕೆಯನ್ನು ಒದಗಿಸಲಾಗಿದೆ ಎಂದರು.
ಕೋವಿಡ್ ಅವಧಿಯಲ್ಲಿ 350 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಕ್ಷೇತ್ರವನ್ನು ಇನ್ನೂ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಯಲ್ಲಿ ಸುಮಾರು ಒಂದುವರೆ ಸಾವಿರ ಮಕ್ಕಳು ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ಶಿಕ್ಷಣವನ್ನು ಕೊಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಸದಸ್ಯ ಮಹದೇವು, ರಾಜೇಂದ್ರ ಕುಮಾರ್, ರೇವಣ್ಣ, ಆನಂದ , ಲಕ್ಷ್ಮಣ್ ಪೂಜಾರಿ, ಗಾರ್ಮೆಂಟ್ಸ್‌ನ ಮಾಲೀಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರು
ಸೇರಿದಂತೆ ಇನ್ನಿತರರು
ಉಪಸ್ಥಿತರಿದ್ದರು.