Advertisement
“ವೀರಶೈವರು ಲಿಂಗಾಯತರೇ ಅಲ್ಲ, ಬಸವಣ್ಣನವರ ಅನುಯಾಯಿಗಳೂ ಅವರಲ್ಲ’ ಎಂದು ಈಗ ಬಹಿರಂಗ ಹೇಳಿಕೆ ನೀಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರ್ಯಾಲಿಗಳನ್ನು ನಡೆಸುತ್ತಿರುವ ಮಾತೆ ಮಹಾದೇವಿ ಅವರು ಈ ಹಿಂದೆ ವೀರಶೈವ ಲಿಂಗಾಯತ ಧರ್ಮ ಸ್ಥಾಪನೆಗೆ ತಾವೇ ಆಸಕ್ತಿ ವಹಿಸಿ ಮಹಾಸಭೆಯ ಕಾರ್ಯಕ್ರಮದಲ್ಲಿ ನಿರ್ಣಯಬೆಂಬಲಿಸಿ ಅಂಕಿತ ಹಾಕಿದ್ದ ಹಸ್ತಾಕ್ಷರದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.
ವೀರಶೈವರೆಲ್ಲರೂ ವರ್ಷಕ್ಕೆ ಒಂದು ಬಾರಿ ಒಂದು ನಿರ್ದಿಷ್ಠ ಸ್ಥಳದಲ್ಲಿ ಒಂದುಗೂಡಬೇಕು. ಆ ಕಾರ್ಯಕ್ರಮಕ್ಕೆ
ಶರಣ ಮೇಳ ಎಂದು ಹೆಸರಿಸುವುದಾಗಿಯೂ, ಸಮ್ಮೇಳನ ಸೇರಲು ಕೂಡಲ ಸಂಗಮ ಕ್ಷೇತ್ರ ಸೂಕ್ತ ಸ್ಥಳವೆಂದು ಮಾತೆ ಮಹಾದೇವಿ ಭಾಷಣ ಮಾಡಿದ್ದರು.
Related Articles
ಕ್ರಿಶ್ಚಿಯನ್ನರಿಗೆ ಜೆರುಸಲೇಂ, ಮುಸ್ಲಿಮರಿಗೆ ಮೆಕ್ಕಾ ಹೇಗೋ ಹಾಗೆ ವೀರಶೈವ ಲಿಂಗವಂತರಿಗೆ ಕೂಡಲ ಸಂಗಮ ಒಂದು ಮೆಕ್ಕಾ, ಜೇರುಸಲೇಂ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಅಷ್ಟೇ ಅಲ್ಲದೇ ವೀರಶೈವ ಮಹಾಸಭೆಯಿಂದ ಪ್ರತಿ ವರ್ಷ ಮೂರು ದಿನ ಶರಣ ಮೇಳ ನಡೆಸಲು ತೀರ್ಮಾನಿಸಿ, ಆ ಮೇಳದ ಕೋಶಾಧ್ಯಕ್ಷರಾಗಿಯೂ ಮಾತೆ ಮಹಾದೇವಿ ಕಾರ್ಯ ನಿರ್ವಹಿಸುತ್ತಾರೆ. ಅದೇ ಸಭೆಯಲ್ಲಿ ದಲಿತ ಜನಾಂಗವನ್ನು ವೀರಶೈವ ಲಿಂಗಾಯತ ಧರ್ಮದ ಚೌಕಟ್ಟಿನಲ್ಲಿ ಸೇರಿಸಿಕೊಳ್ಳುವ ಬಗ್ಗೆಯೂ ಮಾತೆ ಮಹಾದೇವಿ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅಲ್ಲದೇ ಅನೇಕ ಮಠಾಧೀಶರು ಸಿರಿವಂತರಾಗಿದ್ದರೂ, ಪ್ರತಿಯೊಬ್ಬರೂ ಪ್ರತ್ಯೇಕ ಅಸ್ತಿತ್ವಕ್ಕಾಗಿ ಭಾವಿಸಿರುವುದು ವೀರಶೈವರ ಸಂಘಟನೆ ಸಾಧ್ಯವಾಗುತ್ತಿಲ್ಲ. ಯಾರೆಲ್ಲಾ ವೀರಶೈವ ಚೌಕಟ್ಟಿನಲ್ಲಿ ಬರುವರೋ ಅವರೆಲ್ಲಾ ಶರಣರು ಎಂದು ಮಾತೆ ಮಹಾದೇವಿ ಅಂದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಅಂದಿನ ಸಭೆಯಲ್ಲಿ 1991 ರಲ್ಲಿ ನಡೆಯುವ ಜನಗಣತಿ ವೇಳೆ ವೀರಶೈವರಿಗೆ ಪ್ರತ್ಯೇಕ ಧರ್ಮದ ಕಾಲಂ ನೀಡುವಂತೆ ಹಾಗೂ ವೀರಶೈವರನ್ನು ರಾಷ್ಟ್ರೀಯ ಅಲ್ಪ ಸಂಖ್ಯಾತರೆಂದು ಪರಿಗಣಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ.
ಅಂದಿನ ವೀರಶೈವ ಮಹಾಸಭೆಯ ಎಲ್ಲ ನಿರ್ಣಯಗಳಿಗೂ ಬೆಂಬಲ ಸೂಚಿಸಿ ಮಾತೆ ಮಹಾದೇವಿ ಸಹಿ ಹಾಕಿದ್ದಾರೆ. ಅಲ್ಲದೇ ಮಠಾಧೀಶರ ಸ್ವಾರ್ಥಕ್ಕೆ ಧರ್ಮ ಒಡೆಯಬಾರದು ಎಂದು ಹೇಳಿದ್ದ ಮಾತೆ ಮಹಾದೇವಿ ಕ್ರಮೇಣ ವೀರಶೈವ ಮಹಾಸಭೆಯಿಂದ ದೂರ ಸರಿದು. ಲಿಂಗಾನಂದ ಸ್ವಾಮೀಜಿ ಜೊತೆಗೆ ಸೇರಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಆರಂಭಿಸಿದ್ದಾರೆ.