Advertisement

ಮಹದಾಯಿ ತಿರುಗಿಸುವಂತಿಲ್ಲ

06:45 AM Feb 11, 2018 | Team Udayavani |

ಪಣಜಿ: ಮಹದಾಯಿ ನದಿ ನೀರು ಬಳಕೆ ಮಾಡಲು ಕರ್ನಾಟಕಕ್ಕೆ ಸಂಪೂರ್ಣ ಅಧಿ ಕಾರವಿದೆ ಎಂಬುದು ಇಂದಿಗೂ ಗೋವಾ 
ಸರ್ಕಾರದ ನಿಲುವಾಗಿದೆ. ಆದರೆ, ಇದರ ಅರ್ಥವನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡು ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸಲು ಬರುವುದಿಲ್ಲ ಎಂದು ಗೋವಾ ಸಾಲಿಸಿಟರ್‌ ಜನರಲ್‌ ಆತ್ಮಾರಾಮ ನಾಡಕರ್ಣಿ ಹೇಳಿದ್ದಾರೆ.

Advertisement

ನ್ಯಾಯಾಧಿಕರಣದಲ್ಲಿ ಗೋವಾ ಪರ ವಾದ ಮಂಡಿಸಿದ ಅವರು, ಮಹದಾಯಿ ನದಿ ನೀರು ಹರಿದು ಬರುವ ಭಾಗದಲ್ಲಿ ವಾಸಿಸುವ
ಜನರಿಗಾಗಿ ಈ ನೀರು ಪ್ರಮುಖವಾಗಿದೆ. ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸಲು ಗೋವಾ ಯಾವತ್ತೂ
ಸಮ್ಮತಿ ಸೂಚಿಸಿಲ್ಲ ಎಂದು ನಾಡಕರ್ಣಿ ನ್ಯಾಯಾಧಿಕರಣದಲ್ಲಿ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next