Advertisement
ಬುಧವಾರ ಮಾತನಾಡಿದ ಅವರು, ನೆರೆಯ ರಾಜ್ಯಕ್ಕೆ ಅದರ ಪಾಲು ಸಿಗುತ್ತಿಲ್ಲ ಎಂದು ಯಾರಾದರೂ ಭಾವಿಸಿದರೆ ಅದು ಅವರಮೂರ್ಖತನವಷ್ಟೇ ಎಂದಿದ್ದಾರೆ. ಕರ್ನಾಟಕದಲ್ಲಿ ಮಹದಾಯಿ ನದಿ 35 ಕಿಮೀ ಹರಿಯುತ್ತದೆ. ಕರ್ನಾಟಕ ಮಹದಾಯಿ ನದಿ ಪಾತ್ರದ ಪ್ರದೇಶಗಳಿಗೆ ನದಿಯಿಂದ ಕುಡಿಯಲು ನೀರನ್ನು ಬಳಿಸಿಕೊಳ್ಳಬಹುದು. ಆದರೆ ನದಿ ಪಾತ್ರದ ಹೊರತಾದ ಪ್ರದೇಶಗಳಿಗಾಗಿ ನದಿ ನೀರು ಬಳಸಿಕೊಳ್ಳಲು ಅವಕಾಶವಿಲ್ಲ ಎಂದರು. ಕರ್ನಾಟಕ ನದಿ ಪಾತ್ರವಲ್ಲದ ಪ್ರದೇಶಗಳಿಗೆ ನೀರು ನೀಡಲು ಈ ವಿವಾದ ಹುಟ್ಟುಹಾಕಿದೆ. ನೀರು ಹಂಚಿಕೆ ವಿಚಾರ ಈಗ ನ್ಯಾಯಮಂಡಳಿ ಮುಂದಿದೆ ಎಂದು ಹೇಳಿದ್ದಾರೆ.