Advertisement

ಮಾರ್ಚ್‌ಗೆ ಮಹದಾಯಿ ಅಂತಿಮ ತೀರ್ಪು?

06:40 AM Feb 22, 2018 | Team Udayavani |

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧದ ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿ ಎದುರು ದೆಹಲಿಯಲ್ಲಿ ನಡೆದಿರುವ ಅಂತಿಮ ಸುತ್ತಿನ ವಾದ, ಪ್ರತಿವಾದ ಬುಧವಾರ ಮುಕ್ತಾಯಗೊಂಡಿದೆ. ಹೀಗಾಗಿ ಮಾರ್ಚ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

Advertisement

ಗೋವಾ ಎತ್ತಿದ ಆಕ್ಷೇಪಗಳಿಗೆ ಕರ್ನಾಟಕದ ಪರವಾಗಿ ನ್ಯಾಯವಾದಿ ಅಶೋಕ್‌ ದೇಸಾಯಿ, ಮೋಹನ್‌ ಕಾತರಕಿ ಸಮರ್ಥವಾಗಿ ವಾದ ಮಂಡಿಸಿದರು. ಟ್ರಿಬ್ಯುನಲ್‌ ಮುಂದೆ ನಡೆದಿರುವುದು ಸಹೋದರರ ನಡುವಿನ ಪಾಲು ಹಂಚಿಕೆಯ ದಾವೆಯಲ್ಲ. ಇದು ನೀರು ಹಂಚಿಕೆಯ ಪ್ರಕರಣವಾಗಿದ್ದು ಇಲ್ಲಿ ಯಾರಿಗೂ ಅನ್ಯಾಯವಾಗದಂತೆ ಎಲ್ಲರೂ ಗೆಲ್ಲಬೇಕು. ನಿಸರ್ಗಕ್ಕೆ, ಪ್ರಾಣಿ ಪಕ್ಷಿಗಳಿಗೂ ಧಕ್ಕೆಯಾಗದಂತೆ ಇದು ಇತ್ಯರ್ಥವಾಗಬೇಕಿದೆ ಎಂದು ಅಶೋಕ ದೇಸಾಯಿ ಮತ್ತು ಮೋಹನ್‌ ಕಾತರಕಿ ವಾದಿಸಿದರು.

ಮಹದಾಯಿಯಲ್ಲಿಯ 200 ಟಿಎಂಸಿ ಅಡಿ ನೀರಿನಲ್ಲಿ ಕೇವಲ 9 ಟಿಎಂಸಿ ಅಡಿ ನೀರನ್ನು ಗೋವಾ ಬಳಸಿಕೊಳ್ಳುತ್ತಿದೆ. ಇನ್ನುಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ ನಾವು 14.98 ಟಿಎಂಸಿ ಅಡಿ ನೀರನ್ನು ಕೇಳುತ್ತಿದ್ದೇವೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ ಕಾವೇರಿ ತೀರ್ಪನ್ನು ಉಲ್ಲೇಖೀಸಿ ವಾದಿಸಿದರು. ಕಾವೇರಿ ತೀರ್ಪಿನ ಬಗ್ಗೆ ಲಿಖೀತ ಟಿಪ್ಪಣಿ ಕಳುಹಿಸುವಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನ್ಯಾಯ ಮಂಡಳಿ ಸೂಚಿಸಿದೆ. ಮಾರ್ಚ್‌ನಲ್ಲಿ ಟಿಪ್ಪಣಿ ಸಲ್ಲಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next