ಹಾವೇರಿ: ಮಹದಾಯಿ ಹಾಗೂ ಮೇಕೆದಾಟು ಯೋಜನೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕ್ರಿಯೆ ಕುರಿತು ದೆಹಲಿಯಲ್ಲಿ ಚರ್ಚೆ ಮಾಡಿ ಚಾಲನೆ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರೇಕೇರೂರಿನ ಬಸರಿಹಳ್ಳಿ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪರ್ ಕೃಷ್ಣಾ,ಮಹದಾಯಿ, ಮೇಕೆದಾಟು ಯೋಜನೆ ಪ್ರಕ್ರಿಯೆಗಳನ್ನ ದೆಹಲಿಗೆ ಹೋಗಿ ಕಾನೂನು ತಜ್ಞರ ಜೊತೆ ಚರ್ಚಿಸಲಾಗುತ್ತೆ. ಆ ಯೋಜನೆಯನ್ನು ನೋಟಿಪಿಕೇಷನ್ ಮಾಡುವುದಕ್ಕೆ ತೀವ್ರಗತಿಯಲ್ಲಿ ಜಾರಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಇದೆ. ಹೀಗಾಗಿ ಆದಷ್ಟು ಬೇಗನೆ ಕಾರ್ಯ ಆಗುತ್ತದೆ. ಅದಕ್ಕೆ ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದರು.
ಹಾವೇರಿ ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಿದೆ. ಎರಡು ಕೆರೆ ತುಂಬಿಸುವ ಕಾರ್ಯ ಇಂದು ಮಾಡುತ್ತಿದ್ದೇವೆ. ಜಿಲ್ಲೆಯ ಹಲವು ತಾಲೂಕಿನಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೂ ಚಾಲನೆ ನೀಡುತ್ತೇವೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ರೈತರ ಕನಸಿನ ಯೋಜನೆಗೆ ಒತ್ತಾಯ ಮಾಡಿದ್ದೆವು. ಇಂದು ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗುತ್ತಿದೆ ಎಂದರು. ಹಾನಗಲ್, ಬ್ಯಾಡಗಿ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ಕೆರೆ ತುಂಬಿಸುವ ಕೆಲಸ ಮುಗಿಯುವ ಹಂತದಲ್ಲಿವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ಮೈಸೂರು ಪ್ರಕರಣ: ಬಾಲಾಪರಾಧಿ ಸೇರಿ ಐವರು ಅರೆಸ್ಟ್; ತರಕಾರಿ ಮಂಡಿಗೆ ಬಂದವರು ಅಪರಾಧ ಮಾಡಿದರು
ಅಕ್ಟೋಬರ್ 1ರಿಂದ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೊದಲು ಜಾರಿ ಮಾಡುತ್ತಿದ್ದೇವೆ. ಅದನ್ನು ಇಂಪ್ಲಿಮೆಂಟೆಷನ್ ಮಾಡೋಕೆ ಸಮಿತಿ ಮಾಡಿದ್ದೆವು. ಆ ಸಮಿತಿಯ ವರದಿ ಆದರದ ಮೇಲೆ ಜಾರಿ ಮಾಡುತ್ತೇವೆ. ಕಳೆದ ಒಂದು ವರ್ಷದಿಂದ ತಯಾರಿ ನಡೆಯುತ್ತಿದೆ. ಅದರಲ್ಲಿ ಹಲವಾರು ವಿಚಾರಗಳು ಇವೆ. ಎಜುಕೇಷನ್ ಪಾಲಿಸಿ ಡಿಗ್ರಿ ಹಾಗೂ ಇಂಟರ್ ಕೋರ್ಸ್‌ಗಳನ್ನು ತಾಲೂಕಿನ ತಕ್ಕ ಹಾಗೇ ಎಜುಕೇಷನ್ ಕೊಡಬೇಕು ಸಿಎಂ ಬೊಮ್ಮಾಯಿ ಹೇಳಿದರು.