Advertisement

ಮಹಾದಾಯಿ, ಕಳಸಾ ಬಂಡೂರಿ; ಕೇಂದ್ರ ಅರಣ್ಯ ಸಚಿವರ ಭೇಟಿ:ವೀರೇಶ ಸೊಬರದಮಠ ಸ್ವಾಮೀಜಿ

06:19 PM Feb 12, 2024 | Team Udayavani |

ಹುಬ್ಬಳ್ಳಿ: ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ಕೇಂದ್ರ ಅರಣ್ಯ ಸಚಿವರನ್ನು ವಾರದೊಳಗೆ ಭೇಟಿ ಮಾಡಲಾಗುವುದು ಎಂದು ಕರ್ನಾಟಕ ರೈತ ಸೇನಾದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲಪ್ರಭಾ ಡ್ಯಾಮ್ ಕಟ್ಟಿದ್ದೆ ರೈತರ ಕೃಷಿಗಾಗಿ. ಕಾರಣ ಕಳಸಾ ಬಂಡೂರಿ ಯೋಜನೆ ನೀರು ಮಲಪ್ರಭಾ ನದಿಗೆ ಸೇರುವವರೆಗೂ ಹು-ಧಾ. ಮಹಾನಗರ ಪಾಲಿಕೆಯವರು ಜನರಿಂದ ಸಂಗ್ರಹಿಸುತ್ತಿರುವ ನೀರಿನ ಕರವನ್ನು ನದಿ ಪಾತ್ರದ ರೈತರ ಹಿತಾಭಿವೃದ್ಧಿಗೆ ಕೊಡಬೇಕು ಎಂದು ಆಗ್ರಹಿಸಿದರು.

ನರಗುಂದದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ರೈತ ಭವನ ನಿರ್ಮಿಸಲು ಎರಡು ಎಕರೆ ಭೂಮಿ ಕೊಡಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next