Advertisement

“ರುದ್ರದೇವರ ಅನುಗ್ರಹವಿದ್ದಲ್ಲಿ ಇಷ್ಟಾರ್ಥ ಪ್ರಾಪ್ತಿ

04:28 PM Feb 28, 2017 | Harsha Rao |

ಕಾಪು : ಶಿವರಾತ್ರಿಯಂದು ಮಹಾ ರುದ್ರದೇವರು ಹಾಗೂ ಇನ್ನಿತರ ದೇವರುಗಳನ್ನು ಆರಾಧನೆ ಮಾಡುವುದೇ ಭಾರತೀಯರ ಸಂಸ್ಕೃತಿ. ನಮ್ಮ ದುಃಖಗಳನ್ನು ಪರಿಹಾರ ಮಾಡಿ ಇಷ್ಟಾರ್ಥಗಳನ್ನು ನೆರವೇರಿಸುವುದು ರುದ್ರ ದೇವರು ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ / ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಮಾತನಾಡಿ, ಅನಿವಾಸಿ ಭಾರತೀಯ ಉದ್ಯಮಿ ಪಡುಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು, ಊರವರು  ಸೇರಿಕೊಂಡು ಊರಿನ ಬ್ರಹ್ಮಬೈದರ್ಕಳ ಗರಡಿ, ಬಬ್ಬುಸ್ವಾಮಿ ದೈವಸ್ಥಾನ ಧೂಮಾವತಿ ದೈವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯ ರೂಪದ ಧಾರ್ಮಿಕ ಕೇಂದ್ರವನ್ನಾಗಿ ಜೀರ್ಣೋ ದ್ಧಾರಗೊಳಿಸಿರುವುದು ಶ್ಲಾಘನೀಯ ಎಂದರು. ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕೇ¤ಸರ ಬೆಳ್ಳೆ ದೊಡ್ಡಮನೆ ಸುಭಾಸ್‌ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸರಕಾರದ ಮುಜರಾಯಿ ಇಲಾಖೆ ಹಾಗೂ ತನ್ನ ಅನುದಾನದಿಂದ ಸುಮಾರು 29 ಲಕ್ಷ ರೂ. ಅನುದಾನ ದೊರಕಿಸಿ ಕೊಟ್ಟ ಶಾಸಕ ವಿನಯ ಕುಮಾರ್‌ ಸೊರಕೆ ಅವರನ್ನು ಶೀÅಗಳ ಉಪಸ್ಥಿತಿಯಲ್ಲಿ ದೇವಸ್ಥಾನದ ಪರವಾಗಿ ಸಮ್ಮಾನಿಸಿ, ಗೌರವಿಸಲಾಯಿತು.

ಅನಿವಾಸಿ ಭಾರತೀಯ ಉದ್ಯಮಿ ಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ , ಬೆಳ್ಳೆ ದೊಡ್ಡಮನೆ ವಸಂತ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ವಿಶ್ವನಾಥ ಶೆಟ್ಟಿ, ರಾಘು ಪಾಲನ್‌ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ / ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಹರೀಶ್‌ ಶೆಟ್ಟಿ ಬೆಳ್ಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next