Advertisement
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (MVA) ಸರಕಾರವನ್ನು ಉರುಳಿಸುವ ಮೊದಲು ಜೂನ್ 22-29 ರಿಂದ ಒಂದು ವಾರದವರೆಗೆ ಶಿವಸೇನೆಯ ಶಾಸಕರು ಮತ್ತು ಸ್ವತಂತ್ರ ಶಾಸಕರ ಗುಂಪಿನೊಂದಿಗೆ ಶಿಂಧೆ ಗುವಾಹಟಿಯ ಹೋಟೆಲ್‌ನಲ್ಲಿ ತಂಗಿದ್ದ ಐದು ತಿಂಗಳ ನಂತರ ಈಶಾನ್ಯ ರಾಜ್ಯಕ್ಕೆ ಕಿರು ಪ್ರವಾಸ ಕೈಗೊಂಡಿದ್ದಾರೆ.
Related Articles
Advertisement
”ಜೂನ್‌ನಲ್ಲಿ ಆಗಿನ ಬಂಡಾಯ ಶಾಸಕರು ಕಾಮಾಖ್ಯ ದೇವಿಯ ದರ್ಶನ ಪಡೆದು ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ದೇವಿಯು ನಮ್ಮ ಪ್ರಾರ್ಥನೆಯನ್ನು ಕೇಳಿದಳು ಮತ್ತು ಶಿಂಧೆ ಜಿ ಮುಖ್ಯಮಂತ್ರಿಯಾದರು”ಎಂದು ಶಾಸಕರೊಬ್ಬರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಶಿಂಧೆ ಅವರು ಜೂನ್ 22 ರಂದು ಭಿನ್ನಮತೀಯ ಶಿವಸೇನೆ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರೊಂದಿಗೆ ಮುಂಬೈನಿಂದ ಸುಮಾರು 2,700 ಕಿಮೀ ದೂರದಲ್ಲಿರುವ ಗುವಾಹಟಿಯನ್ನು ತಲುಪಿದ್ದರು.ಜೂನ್ 29 ರವರೆಗೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಅವರು ಗೋವಾಕ್ಕೆ ತೆರಳಿ ನಂತರ ಮುಂಬೈಗೆ ತೆರಳಿದ್ದರು.