ಮದ್ದೂರು: ಮದ್ಯದಂಗಡಿ ಸ್ಥಳಾಂತರಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿ ತಾಲೂಕಿನಮಾಚಹಳ್ಳಿ ಹಾಗೂ ತೂಬಿನಕೆರೆ ಗ್ರಾಮಸ್ಥರುಪ್ರತಿಭಟನೆ ನಡೆಸಿದರು.
ತಾಲೂಕಿನ ಆತಗೂರು ಹೋಬಳಿಯ ಮಾಚಹಳ್ಳಿ ಹಾಗೂ ತೂಬಿನಕೆರೆ ಸ್ಥಳೀಯ ನಿವಾಸಿಗಳುಜಮಾವಣೆಗೊಂಡು ಗ್ರಾಮದಲ್ಲಿ ಮದ್ಯದಂಗಡಿತೆರೆಯಲು ಮುಂದಾಗಿರುವ ಕ್ರಮವನ್ನುಖಂಡಿಸಿದರಲ್ಲದೇ ಕೂಡಲೇ ಅಬಕಾರಿ ಇಲಾಖೆಅಧಿಕಾರಿಗಳು ಸ್ಥಳಾಂತರಕ್ಕೆ ಅವಕಾಶ ಕಲ್ಪಿಸದಂತೆ ಒತ್ತಾಯಿಸಿದರು.
ತಾಲೂಕಿನ ಕೆಸ್ತೂರು ಗ್ರಾಮದಲ್ಲಿರುವ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್‌ನ್ನು ಮಾಚಹಳ್ಳಿಗೆ ಸ್ಥಳಾಂತರಿಸಲು ಮುಂದಾಗು ತ್ತಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಉಂಟಾಗುವ ಜತೆಗೆ ದಲಿತರು ಹಾಗೂ ಅಲ್ಪಸಂಖ್ಯಾತರ ಕಾಲೋನಿ ಮತ್ತು ಮಹಿಳಾ ಹಾಲುಉತ್ಪಾದಕರ ಸಹಕಾರ ಸಂಘದ ಸಮೀಪದಲ್ಲೇತೆರೆಯಲು ಕಾರ್ಯ ಚಟುವಟಿಕೆ ಆರಂಭಿಸಿದ್ದು ಕೂಡಲೇ ಸ್ಥಗಿತಗೊ ಳಿಸುವಂತೆ ಆಗ್ರಹಿಸಿದರು.
ಗ್ರಾಪಂ ಆಡಳಿತ ಮಂಡಳಿಯ ಅನುಮತಿಪಡೆಯದೇ ರೆವಿನ್ಯೂ ಜಾಗದಲ್ಲಿ ಅಕ್ರಮವಾಗಿನಿರ್ಮಿಸಿರುವ ಕಟ್ಟಡದಲ್ಲಿ ಮದ್ಯದಂಗಡಿತೆರೆಯಲು ಸಿದ್ಧರಾಗಿದ್ದಾರೆಂದು ಆರೋಪಿಸಿ,ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಜತೆಗೆ ಸ್ಥಳಾಂತರಿಸಲು ಅವ ಕಾಶಕಲ್ಪಿಸದಂತೆ ಮನವಿ ಮಾಡಿದರು.
ಸ್ಥಳಾಂತರಿಸಲು ಮುಂದಾದಲ್ಲಿ ಅಬಕಾರಿಇಲಾಖೆ ಕಚೇರಿ ಎದುರು ಅಮರಣಾಂತ ಉಪವಾಸ, ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿಪ್ರತಿಭಟನೆ ಹಿಂಪಡೆದರು.ನ್ಯಾಷಿನಲ್ ಹುಮೆನ್ ರೈಟ್ಸ್ ಸಂಘಟನೆಅಧ್ಯಕ್ಷ ಸಿ.ಎಚ್.ಚಂದ್ರಕುಮಾರ್, ಉಪಾಧ್ಯಕ್ಷಶ್ರೀನಿವಾಸಶೆಟ್ಟಿ, ಆನಂದಯ್ಯ, ಸ್ಥಳೀಯರಾದಪವಿತ್ರಾ, ಜ್ಯೋತಿ, ಮಂಜು, ದೀಪಕ್, ಕವಿತಾ,ಚಿಕ್ಕತಾಯಮ್ಮ, ಜಯಮ್ಮ, ಕೃಷ್ಣೇಗೌಡ, ತಿಮ್ಮಮ್ಮ,ಹುಚ್ಚಮ್ಮ ನೇತೃತ್ವ ವಹಿಸಿದ್ದರು.