ಮಂಡ್ಯ: ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೂಲಿ ಕಾರ್ಮಿಕರ ಬದುಕು ಮತ್ತು ಆರ್ಥಿಕಪರಿಸ್ಥಿತಿ ದುಸ್ಥಿತಿಗೊಳ್ಳುತ್ತಿದೆ ಎಂದು ಕಾಂಗ್ರೆಸ್‌ಮುಖಂಡ ರವಿಕುಮಾರ್‌ಗೌಡ ಗಣಿಗಹೇಳಿದರು.
ನಗರದ ಕಲ್ಲಹಳ್ಳಿಯಲ್ಲಿಯಲ್ಲಿ ಭಾನುವಾರ ರವಿಕುಮಾರ್‌ಗೌಡ ಗಣಿಗ ಅವರ ವತಿಯಿಂದಶಾಮಿಯಾನ ಮತ್ತು ಅಲಂಕಾರ-ಧ್ವನಿಬೆಳಕುಕಚೇರಿಗಳಲ್ಲಿನ ಕಾರ್ಮಿಕರಿಗೆ ಉಚಿತ ದಿನಿಸಿಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿಮಾತನಾಡಿದರು.ಲಾಕ್‌ಡೌನ್‌ನಿಂದ ಕೂಲಿಕಾರ್ಮಿಕರಜೀವನ ದುಸ್ಥಿತಿಯಲ್ಲಿದೆ.
ಆಹಾರ ಪದಾರ್ಥಖರೀದಿಸಲು ಆರ್ಥಿಕ ಮುಗ್ಗಟ್ಟು ಗೋಚರಿಸುತ್ತಿದೆ. ಅದೇ ದಿನ ಕೂಲಿ ಮಾಡಿ ಆಹಾರ ಪದಾರ್ಥಗಳ ತಂದು ಜೀವನ ನಡೆಸುವ ಅಸಂಘಟಿತಕಾರ್ಮಿಕರ ಹಸಿವು ನೀಗಿಸಲು ನಮ್ಮದುಅಳಿಲು ಸೇವೆಯಾಗಿದೆ ಎಂದರು.ಕೋವಿಡ್-19 ಸಂಕಷ್ಟ ದಿನಗಳು ಬಹುಬೇಗ ಮುಗಿಯಲಿ, ಎಲ್ಲರೂ ಆರೋಗ್ಯ ರಕ್ಷಣೆಮಾಡಿಕೊಳ್ಳಲು ಜಾಗೃತಿಯಿಂದ ಇರುವುದುಉತ್ತಮ. ಕೊರೊನಾ ಸಾಂಕ್ರಾಮಿಕ ರೋಗದಿಂದ ಇಂದು ಇದ್ದವರು ನಾಳೆ ಇಲ್ಲವಾಗುತ್ತಿದ್ದಾರೆ.
ಎಚ್ಚರಿಕೆಯು ಉತ್ತಮ ಮಾರ್ಗವಾಗಿದೆಎಂದು ಜಾಗೃತಿ ಮೂಡಿಸಿದರು.ಇದೇ ಸಂದರ್ಭದಲ್ಲಿ ಸ್ಥಳೀಯ ಶಾಮಿಯಾನ ಮತ್ತು ಅಲಂಕಾರ-ಧ್ವನಿಬೆಳಕುಕಚೇರಿಗಳಲ್ಲಿನ 100 ಕಾರ್ಮಿಕರಿಗೆ ಆಹಾರದಿನಸಿ ಕಿಟ್ ವಿತರಿಸಲಾಯಿತು.
ಬಳಿಕ ಆನೆಕೆರೆಬೀದಿಯ ಲಕ್ಷಿ¾àಜನಾರ್ದನ ದೇವಸ್ಥಾನದ ಆವರಣದಲ್ಲಿ ಸವಿತಾ ಸಮಾಜದ ಅವಶ್ಯಕತೆಯಿರುವವರಿಗೆ ಹಾಗೂ ಬಂದಿಗೌಡ ಬಡಾವಣೆಯಗಾಂ ಧಿ ಆಟೋ ಚಾಲಕರ ಸಂಘದ ಕಚೇರಿಯಹೊರಗಡೆ ಆಟೋ ಚಾಲಕರಿಗೆ ದಿನಸಿ ಕಿಟ್‌ವಿತರಿಸಲಾಯಿತು.ವೇದಿಕೆಯಲ್ಲಿ ಹಿಂದುಳಿದ ವರ್ಗಗಳಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ನಗರಾಧ್ಯಕ್ಷರುದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು,ನಗರಸಭಾ ಸದಸ್ಯ ನಹೀಂ, ರಾಮಲಿಂಗಯ್ಯ,ಶಾಮಿಯಾನ ಸಂಘದ ಕೃಷ್ಣೇಗೌಡ, ಅಕºಲ್,ಮಂಜುನಾಥ್, ಯುವ ಮುಖಂಡಲಕ್ಷಿ¾ಕಾಂತ್ ಮತ್ತಿತರರಿದ್ದರು.