ಮುಂಬಯಿ: ಉಪನಗರ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದ ಶ್ರೀಕೃಷ್ಣ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಮಧ್ವ ನವಮಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.
ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪೂಜಾವಿಧಿಗಳನ್ನು ನೆರವೇರಿಸಿ, ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿಪ್ರವಚನ ಮಾಡುವಾಗಲೇ ಅದೃಶ್ಯರಾಗಿರುವ ಮಧ್ವರ ವೃಂದಾವನ ಇನ್ನೂ ಆಗಿಲ್ಲ. ಮಧ್ವಾಚಾರ್ಯರು ಶಾಸ್ತ್ರದ ಬಗ್ಗೆ ಮತ್ತು ದೇವರಲ್ಲಿ ಅಪಾರ ಭಕ್ತಿ-ನಂಬಿಕೆ ಹೊಂದಿದ್ದರು.
ದೇವರ ಮೊರೆಯಿಂದಲೇ ಆತ ನಮ್ಮ ಹತ್ತಿರ ಬರುವನು ಮತ್ತು ನಮ್ಮಲ್ಲಿ ನೆಲೆಯಾಗಿ ಸಮೃದ್ಧ ಬದುಕು ಅನುಗ್ರಹಿಸುವನು ಎಂಬ ಸಿದ್ಧಾಂತ ಮಧ್ವಾಚಾರ್ಯರದ್ದಾಗಿತ್ತು. ಅಗಾಧ ಭಕ್ತಿಯಿಂದ ಭಗವಂತನನ್ನು ಪೂಜಿಸಿ, ಕರೆದರೆ ಭಗವಂತ ನಮ್ಮನ್ನು ನೋಡುತ್ತಾನೆ ಮತ್ತು ನಮಗೆ ಒಲಿಯುತ್ತಾನೆ ಎಂಬ ಅಚಲವಾದ ವಿಶ್ವಾಸ ಮಧ್ವಾಚಾರ್ಯರಿಗೆ ಇತ್ತು ಎಂದರು.
ಇದನ್ನೂ ಓದಿ: ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ
ಕಾರ್ಯಕ್ರಮಯಲ್ಲಿ ಪರೇಲ್ ಶ್ರೀನಿವಾಸ ಭಟ್, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೆr ಸಹಿತ ಅನೇಕ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಧೆÌàಶ ಭಜನ ಮಂಡಳಿಯಿಂದ ಭಜನೆ, ಹರಿನಾಮ ಸಂಕೀರ್ತನೆ ನೇರವೇರಿತು.
ಚಿತ್ರ -ವರದಿ: ರೋನ್ಸ್ ಬಂಟ್ವಾಳ್